ಶುಕ್ರವಾರ, ಮಾರ್ಚ್ 12, 2010

ಸ್ವಗತೋನ್ಮತ್ತ ತಲ್ಲಣಗಳು

ಇಲ್ಲಿರುವುದೆಲ್ಲಾ ಬಿಡಿ ಬಿಡಿ ಭಾವನೆಗಳು. ಹತ್ತಾರು ಕ್ಷಣಗಳಲ್ಲಿ ಹೊಳೆದದ್ದು, ಜುಮ್ಮೆನ್ನುವಂತೆ ಮಾಡಿದ್ದು. ಇಲ್ಲಿನ ಪ್ರತೀ ಶಬ್ದ, ಸಾಲು ಹಲವಾರು ಅರ್ಥದೊಂದಿಗೆ ಕಾಡಿವೆ. ಬಿಡಿ ಸಾಲುಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕತೆಗಳಿವೆ. ಹಾಗಂತ ಅನ್ನಿಸಿದೆ ಬರೆದಾದ ಮೇಲೆ. ಹಾಗಲ್ಲ ಅಂತಾನೂ ಅನ್ನಿಸಿದೆ, "ಹಾಗನ್ನಿಸಿದ" ನಂತರದ ಫಳಿಗೆಗೆ. ನಿಮಗೇನು ಅನ್ನಿಸುತ್ತೋ...???

--
ಹೂ
ಮುತ್ತಿಟ್ಟರೆ
ಬಾಡುತ್ತಾಳೆ


--
ನಿನ್ನೆ
ಕಂಡ
ಸೂರ್ಯ
ಇವತ್ತಿಲ್ಲ
ಹಗಲು


--
ಕುಕ್ಕರಿನ
ವಿಶಿಲು
ಜೀವ
ತೇಗುತ್ತದೆ


--
ಕರಚಿದ
ಕರಿಬೇವಿನ
ಎಲೆಗಳಲಿ
ಒಗ್ಗರಣೆ
ಹಸಿರು


--
ಅಕ್ಷರ
ಮೂಡುತ್ತಿದೆ
ಕಂಪ್ಯೂಟರ್
ಪರದೆ
ಇನ್ನೂ
ಖಾಲಿ


--
ಹಳದಿ
ರಸೀತಿಯಲಿ
ಉಳಿದ
ಲೆಕ್ಕ
ಅರೆ
ಚುಕ್ತಾ


--
ಟೆರೇಸಿನಲಿ
ನಿಂತೆ
ನಾನು
ನಗರ
ಬೆತ್ತಲೆ


--
ನಾನಿದ್ದೇನೆ
ದೀಪದ
ಬುಡದಲ್ಲಿ
ಸತ್ತಿದೆ
ಹಾತೆ

3 ಕಾಮೆಂಟ್‌ಗಳು:

nelamugilu ಹೇಳಿದರು...

bahala dinagala nantara matte ninna hale kavitegalannu odida mele enu yochisabeku endu baruttidda yochane indu matte marukaliside.
hosatanakke vandanegalu...
goodluck...

ಅನಾಮಧೇಯ ಹೇಳಿದರು...

hai,,,,very nice ,,,new perception in your writing...aadru.andina dina kavithe odalu kottiddeyalla...?aa bhavanegalu eega elliddave?. Naaadoli.

ಟೀನಾ ಹೇಳಿದರು...

ಕಾರ್ತಿಕ್

ಎಲ್ಲಿಂದಲೊ ಒಂದಿಷ್ಟು ತಂಗಾಳಿ ಈ ಸುಡುಶೆಖೆಯ ನಡುವೆ ಆವರಿಸಿಕೊಂಡ ಹಾಗೆ ಅನ್ನಿಸಿತು. My kind of poetry. ನನಗೆ ಸಾಲುಗಳು ಈ ರೀತಿ ಇರಬೇಕು. Glad I came across your lines. ಟೀನಾ