ಗುರುವಾರ, ಜೂನ್ 10, 2010

ಒಂದಂಕೆ- ನೋವೆಂಬ ನಲಿವಿನ ಕಾಲ


ಒಂದು
ಮಾತನ್ನು ಕೂಡಿಟ್ಟಿದ್ದೆ
ಅದು ಮೌನದಲ್ಲೇ
ಕರಗಿ ಹೋಯಿತು


ಒಂದು
ಹನಿ ಕಣ್ಣಲ್ಲಿ ಬಚ್ಚಿಟ್ಟಿದ್ದೆ
ಅದು ರೆಪ್ಪೆಗಳಿಗೆ
ತಿಳಿದು ಹೋಯಿತು


ಒಂದು
ಮೊಗ್ಗನ್ನು ಇಟ್ಟುಕೊಂಡಿದ್ದೆ
ಅದು ಸೂರ್ಯನಿಗೆ
ಇಷ್ಟವಾಗಿ ಹೋಯಿತು


ಒಂದು
ನವಿಲುಗರಿ ಸಿಕ್ಕಿತು
ಅದಕ್ಕೆ ನವಿಲು
ಬಣ್ಣ ತುಂಬದೇ ಹೋಯಿತು

11 ಕಾಮೆಂಟ್‌ಗಳು:

Subrahmanya ಹೇಳಿದರು...

ಮಸ್ತ್ !.

Apoorva ಹೇಳಿದರು...

good one :)

Narayan Bhat ಹೇಳಿದರು...

ಒಂದೊಂದೇ ಆಗಿ ಎಷ್ಟೊಂದು ಗರಿಗಳು!...ಚೆನ್ನಾಗಿದೆ.

ಸಾ. ಹೇಮಂತ ಕುಮಾರ ಹೇಳಿದರು...

ಇಷ್ಟವಾಗಿ ಹೋಯಿತು...

ಗಿರಿ ಹೇಳಿದರು...

wow..
ಒಂದು
ಹನಿ ಕಣ್ಣಲ್ಲಿ ಬಚ್ಚಿಟ್ಟಿದ್ದೆ
ಅದು ರೆಪ್ಪೆಗಳಿಗೆ
ತಿಳಿದು ಹೋಯಿತು
tumba isTa aayTu karthik..

preetiyinda
-giri

Nandan ಹೇಳಿದರು...

tumba chennaguntu kano, ista aythu.... great...

With Love...
Nandu...

ನಾಗರಾಜ್ .ಕೆ (NRK) ಹೇಳಿದರು...

tumba chennagide, kushiyaytu.

Keshavaranjan.C ಹೇಳಿದರು...

better one

Hari ಹೇಳಿದರು...

khushiyagatte...
good one


-Hari

Ashwini hosangadi ಹೇಳಿದರು...

thumba channagide... karthik

Bindu Yadav ಹೇಳಿದರು...

ishtavaayithu....