ಮಂಗಳವಾರ, ಜೂನ್ 29, 2010

ಯಕ್ಷ ಕಿನ್ನರರ "ಮಾಯಾಲೋಕ"

"ಮಾಯಾಲೋಕ" ನನ್ನ ಇತ್ತೀಚಿನ 15 ನಿಮಿಷಗಳ ಸಾಕ್ಷ್ಯಚಿತ್ರ. ಇಲ್ಲಿರುವುದು ಒಂದು ರಾತ್ರಿಯ ಯಕ್ಷಗಾನ ಬಯಲಾಟ ಪ್ರಸಂಗವೊಂದರ ದೃಶ್ಯ ಕತೆ. 

ಯಕ್ಷಗಾನ ಸೃಷ್ಟಿಸುವ ಮಾಯಾಲೋಕದೆಡೆಗೆ ಕರಾವಳಿಯ ಮಂದಿಗೊಂದು ಬೆರಗಿದೆ. ದಿನವಿಡೀ ಸಾಮಾನ್ಯನಂತಿರುವ ವ್ಯಕ್ತಿ ಪ್ರತೀ ದಿನ ಸಂಜೆಯಾಗುತ್ತಲೇ ಬಣ್ಣ ಹಚ್ಚುತ್ತಾ ರಾತ್ರಿಗೆ ರಾವಣನೋ, ಮಹಿಷಾಸುರನೋ, ರಾಮನೋ ಆಗಿ ಇಡೀ ರಂಗಸ್ಥಳವನ್ನು ಭಯಭೀತಗೊಳಿಸುತ್ತಾನೆ, ಪುನೀತನನ್ನಾಗಿಸುತ್ತಾನೆ. ಮತ್ತೆ ಮರುದಿನ ರಾತ್ರಿ ಹೊಸದೊಂದು ಪ್ರಸಂಗದ ಭಿನ್ನ ಪಾತ್ರವಾಗಿ ನಲಿದು ಬಿಡುತ್ತಾನೆ. ಪ್ರೇಕ್ಷಕನ ಪಾಲಿಗೆ ಅನಿರ್ವಚನೀಯವಾದ ಇಂತಹ ಪುಳಕವನ್ನು ಹಿಡಿದಿಡುವುದು "ಮಾಯಾಲೋಕ" ಸಾಕ್ಷ್ಯಚಿತ್ರದ ಮುಖ್ಯ ಉದ್ದೇಶ.

ಈ ವಿಷಯವನ್ನು ಮನದಲ್ಲಿಟ್ಟುಕೊಂಡು ಪ್ರೇಕ್ಷಕನೊಬ್ಬ ಯಕ್ಷಗಾನ ಬಯಲಾಟವನ್ನು ಎದುರುಗೊಳ್ಳುವಾಗ ಮೂಡುವ ದೃಶ್ಯ ಸರಣಿಯ ಮೂಲಕವೇ ಯಕ್ಷಗಾನದ ದೃಶ್ಯ ಕತೆಯನ್ನು ಹೇಳಲು ಪ್ರಯತ್ನಿಸಲಾಗಿದೆ. ಆದ್ದರಿಂದ ಪ್ರೇಕ್ಷಕನ ಭಾವಕೋಶದ ಬೆರಗಿನ ಭಾಗವಾದ ಚೌಕಿಯ ದೃಶ್ಯಗಳು ಇಡೀ ಸಾಕ್ಷ್ಯಚಿತ್ರದಲ್ಲಿ ಮಧ್ಯೆ ಮಧ್ಯೆ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಡೆಯುವ ಬಣ್ಣಗಾರಿಕೆಯ ತಯಾರಿಗಳು ದೃಶ್ಯ ಗುಚ್ಛವಾಗಿ ಸರಣಿಯುದ್ದಕ್ಕೂ ಇವೆ.

ಕಾರ್ಕಳದ ಕುಕ್ಕುಂದೂರಿನಲ್ಲಿ ನಡೆದ ಯಕ್ಷಗಾನ ಬಯಲಾಟವನ್ನು ಈ ಸಾಕ್ಷ್ಯಚಿತ್ರಕ್ಕಾಗಿ ಚಿತ್ರೀಕರಿಸಲಾಗಿದೆ. ಗೆಳೆಯ ದರ್ಶನ್ ಕ್ಯಾಮರಾ ಹಿಡಿದಿದ್ದಾನೆ. ಅವನ ಸಹಕಾರಕ್ಕೆ ಋಣಿ. ಇದಕ್ಕೆ ಸ್ಕ್ರಿಪ್ಟ್, ಹಿನ್ನೆಲೆ ಧ್ವನಿ, ಧ್ವನಿಗ್ರಹಣ ಎಲ್ಲವೂ ನನ್ನದೇ. ಅಸಂಖ್ಯ ಮುದ್ದಾದ ಚಿತ್ರಿಕೆಗಳಲ್ಲಿ ಸೂಕ್ತವಾದದ್ದನ್ನು ಆಯ್ದುಕೊಳ್ಳುತ್ತಾ, ಮತ್ತೆ ಮತ್ತೆ ದೃಶ್ಯಸರಣಿಯನ್ನು ಚೊಕ್ಕಟಗೊಳಿಸುತ್ತಾ ಚಿತ್ರಿಕೆಗಳನ್ನು ಹೆಣಿಯುವ, ಬೆಸೆಯುವ ಕೆಲಸವಾದ ಸಂಕಲನವನ್ನೂ ನಾನೇ ನಿಭಾಯಿಸಿದ್ದೇನೆ.

ಚಿತ್ರೀಕರಣದ ಸಂದರ್ಭದಲ್ಲಿ ಮನೆಮಂದಿಯಂತೆ ನಮ್ಮಿಬ್ಬರನ್ನು ಸತ್ಕರಿಸಿ, ಆದರಿಸಿದ ಕುಕ್ಕುಂದೂರಿನ ಮಂದಿಗೆ, ಕಟೀಲು ಯಕ್ಷಗಾನ ಮೇಳದ(2ನೇ ಮೇಳ) ಎಲ್ಲಾ ಕಲಾವಿದರಿಗೆ, ಆಡಳಿತ ಮಂಡಳಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಮ್ಮಿಯೇ. ಯಕ್ಷಗಾನದ ಬಗ್ಗೆ ಕಲಾವಿದರಿಗಿರುವ ಭಾವತೀವ್ರತೆಗೆ(ಪ್ಯಾಶನ್) ನಮ್ಮದೊಂದು ನಮಸ್ಕಾರ.


ಈ ಸಾಕ್ಷ್ಯಚಿತ್ರಕ್ಕಾಗಿ ಬಳಸಲಾದ ಉಪಕರಣ ಹಾಗೂ ತಂತ್ರಾಂಶಗಳು

ಕ್ಯಾಮರಾ: ಸೋನಿ ಪಿಡಿ 170 (ರಾತ್ರಿ ಚಿತ್ರೀಕರಣ ಸ್ಥಳದಲ್ಲಿ ಲಭ್ಯವಿದ್ದ ಬೆಳಕಿನಲ್ಲೇ ಚಿತ್ರೀಕರಿಸಿದ್ದು)
ಧ್ವನಿಗ್ರಹಣ: ಪ್ರೋ ಟೂಲ್ ಆಡಿಯೋ ಕನ್ಸೋಲ್, ಅಡೋಬ್ ಆಡಿಷನ್ 3.0
ಸಂಕಲನ: ಅಡೋಬ್ ಪ್ರಿಮಿಯರ್ ಪ್ರೋ

ಸಮಯ: 15 ನಿಮಿಷ /ಕನ್ನಡ
ಫಾಮ್ಯಾಟ್: ಪಾಲ್ ವೈಡ್ ಸ್ಕ್ರೀನ್(16:9)


ಈ ಸಾಕ್ಷ್ಯಚಿತ್ರದಿಂದ ಆಯ್ದ ಕೆಲವೊಂದು ದೃಶ್ಯ ತುಣುಕುಗಳನ್ನು ಕೆಳಗಿನ ವಿಡಿಯೋದಲ್ಲಿ ವೀಕ್ಷಿಸಬಹುದು. ನಿಮ್ಮ ಅನಿಸಿಕೆ ತಿಳಿಸಿ.

http://www.youtube.com/watch?v=i5BpJRK0Amk

7 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕಾರ್ತಿಕ್,
ಬಹಳ ಒಳ್ಳೆಯ ಪ್ರಯತ್ನ. ಕೊನೆಯ ಸೀನಿನಲ್ಲಿ ಕ್ಯಾಮರ ಶೇಕ್ ಸ್ವಲ್ಪ ಜಾಸ್ತಿ ಆಯ್ತು ಅನ್ನಿಸಿತು.
ನಿಮ್ಮ ಬ್ಲಾಗನ್ನು ಕೆಲವು ದಿನಗಳಿಂದ ಓದುತ್ತಿದ್ದೇನೆ. ನಾನು ಕೂಡ ಸಾಕ್ಷ್ಯಚಿತ್ರ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಆಸಕ್ತಿ ಇರಿಸಿಕೊಂಡಿದ್ದೇನೆ.
ನನಗೆ video DSLRಗಳನ್ನು ಬಳಸುವ ಆಸಕ್ತಿ ಇದೆ. ಇದಕ್ಕೆ ಮುಖ್ಯ ಕಾರಣ ಈ ಕ್ಯಾಮರಾಗಳಲ್ಲಿ ಬಳಸಬಹುದಾದ ಲೆನ್ಸ್ಗಳು. ಹಾಗೆ ನಾನು ಫೋಟೋಗ್ರಫಿ ಹಿನ್ನೆಲೆಯಿಂದ ಬಂದಿರುವುದರಿಂದ ಇದು ಸುಲಭ ಮಾರ್ಗ. ನಿಮಗೆ ಇದಾರೆ ಬಗ್ಗೆ ಮಾಹಿತಿ ಇದ್ದಲ್ಲಿ ದಯವಿಟ್ಟು ಟಿಪ್ಪಣಿ ಕೊಡಿ. ಇನ್ನು ಒಂದೆರಡು ದಿನಗಳಲ್ಲಿ ಕ್ಯಾಮೆರ ತೆಗೆದುಕೊಳ್ಳುವ ಪ್ಲಾನ್ ಇದೆ. Canon T20i ಮತ್ತು Canon 7D ಎರಡರಲ್ಲಿ ಒಂದು ಅನ್ನುವ ಅಂದಾಜಿದೆ.

ಶ್ರೀನಿಧಿ.ಡಿ.ಎಸ್ ಹೇಳಿದರು...

hmm, sikkaga detail aagi matadteeni!:)

hEmAsHrEe ಹೇಳಿದರು...

well done!
is there any scope to watch it full ? not getting a fair idea about the whole film, as it is only 2 min clip in Youtube.

nonetheless, the camera work, lighting, shot compositions are good, apart from some jerks in pan shots.

Good Luck.

hEmAsHrEe ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
krishnaveni ಹೇಳಿದರು...

hi karthik, it documentary seems really good.. and i wish to see the full part..
and one more thing i want to know why you gave title as "mayaloka"?

Srinivasa Pejathaya ಹೇಳಿದರು...

karthik

olleya prayathna

keep it up

ದೀಪಸ್ಮಿತಾ ಹೇಳಿದರು...

ನನಗೂ ದೃಶ್ಯಮಾಧ್ಯಮದ ಬಗ್ಗೆ ಒಲವಿದೆ. ನಮ್ಮ ನಾಡಿನ ಕಲೆ, ಜಾನಪದ, ವಿಶಿಷ್ಟ ವೃತ್ತಿಗಳು, ದಟ್ಟ ಅರಣ್ಯದಲ್ಲಿ ಅಡಗಿರುವ ಜಲಪಾತಗಳು ಮುಂತಾದವುಗಳ ಬಗ್ಗೆ ಛಾಯಚಿತ್ರ ಮತ್ತು ವಿಡಿಯೋ (ಸಾಕ್ಷ್ಯಚಿತ್ರ ರೊಪದಲ್ಲಿ) ಮಾಡಬೇಕೆಂದು ಆಸೆಯಿದೆ. ಇದೇ ತರಹದ ಆಸಕ್ತಿ ಇರುವವರು ಸಿಕ್ಕರೆ ಜತೆಗೂಡಿ ಪ್ರಯತ್ನಿಸಬಹುದು.

video editingಗೆ ಉತ್ತಮ ತಂತ್ರಾಂಶ ಯಾವುದು? ನಾನು ಇದುವರೆಗೆ ಉಪಯೋಗಿಸಿದ್ದು Microsoft Movie Maker. ಪರವಾಗಿಲ್ಲ, ಆದರೆ ಇದರಲಿ ಸ್ವಲ್ಪ clarity ಕಡಿಮೆಯಾಗುತ್ತದೆ ಅನಿಸುತ್ತದೆ.