ಮಂಗಳವಾರ, ಜನವರಿ 19, 2010

ಕನಸುಗಳಿಗಿದು ಕಾಲವಲ್ಲ

ಪದವಿಯ ದ್ವಿತೀಯ ವರ್ಷದಲ್ಲಿದ್ದಾಗ ಬರೆದ ಕವಿತೆಯಿದು.

ಕನಸುಗಳಿಗಿದು
ಕಾಲವಲ್ಲ

ಕಾಮನಬಿಲ್ಲು ಕ್ಷಿತಿಜದಲಿ
ಮಿನುಗಿದ್ದು ನೆನಪಿಲ್ಲ
ರಾತ್ರಿಯ ನಕ್ಷತ್ರಗಳು
ಸ್ಪಾಟ್ಲೈಟುಗಳಾಗಿ ಬಿಟ್ಟಿವೆ
ಸೂರ್ಯ ಬಚ್ಚಲು ಕಾಯಿಸುತ್ತಾನೆ
ಬಿದಿಗೆ ಚಂದ್ರಮನ
ಬೆಳಕಿನ ಊಟಕ್ಕೆ
60 ವ್ಯಾಟಿನ ಬಲ್ಬು ಬಿಡುವುದಿಲ್ಲ
ಬಾಲ್ಕನಿಯ ಮೌನ
ಟ್ರಾಫಿಕ್ಕು ಸದ್ದಿಗೆ ಸುಸ್ತಾಗಿ ಮಲಗಿದೆ
ಗೋಡೆಯ ಮೇಲಿನ
ಪ್ಲಾಸ್ಟಿಕ್ ಹೂವು ಬಾಡುತ್ತದೆ
ಎನ್ನುವ ಭರವಸೆಯಿಲ್ಲ
ಕನ್ನಡಿಯ ಮುಖ
ನಗುವುದನ್ನು ನಾ ನೋಡಿಲ್ಲ
ಒಂಟಿಯಾಗಿ
ನಡೆಯಬೇಕು ಅಂತ ಅನಿಸುವುದಿಲ್ಲ
ಸಿಗರೇಟಿನ ಕಿಡಿ
ತುಟಿ ಸುಟ್ಟರೂ ಚೀರಬೇಕೆನಿಸುವುದಿಲ್ಲ
ರಾತ್ರಿ ಕಂಡ ಕನಸು
ಇವತ್ತು ಬೆಳಿಗ್ಗೆ ನೆನಪಿಗೇ ಬರುವುದಿಲ್ಲ

ಈಗಂತೂ ಖಾತ್ರಿಯಾಗಿದೆ
ಕನಸುಗಳಿಗಿದು
ಕಾಲವಲ್ಲ!

8 ಕಾಮೆಂಟ್‌ಗಳು:

ಮನೋರಮಾ.ಬಿ.ಎನ್ ಹೇಳಿದರು...

ಚೆನ್ನಾಗಿದೆ. ಆವಾಗ ಬರೆದರೇನು..?ಬೆಳೆವ ಸಿರಿ ಮೊಳಕೆಯಲ್ಲೇ ಅಲ್ವ?

ಮನೋರಮಾ.ಬಿ.ಎನ್ ಹೇಳಿದರು...

ಚೆನ್ನಾಗಿದೆ. ಆವಾಗ ಬರೆದರೇನು..?ಬೆಳೆವ ಸಿರಿ ಮೊಳಕೆಯಲ್ಲೇ ಅಲ್ವ?

ಶ್ವೇತಾ ಹೆಗಡೆ ಹೇಳಿದರು...

e maraya tumba chennagide kano......

Unknown ಹೇಳಿದರು...

ಕವಿತೆಯ ಫಾರ್ಮ್ ಚೆನ್ನಾಗಿದೆ ಕಾರ್ತಿಕ್, ಜಯಂತರ ನೀಲಿಮಳೆಯ ಛಾಪು ಎಲ್ಲೋ ಒಂದೆಡೆ ಮಿಂಚಿದಂತೆನಿಸಿತು. ಸೂರ್ಯ ಬಚ್ಚಲು ಕಾಯಿಸುವುದು, ಟ್ರಾಫಿಕ್ಕಿನ ಸದ್ದಿಗೆ ಬಾಲ್ಕನಿಯ ಮೌನವೇ ಸುಸ್ತಾಗಿ ಮಲಗುವುದು, ಪ್ಲಾಸ್ಟಿಕ್ಕಿನ ಹೂವು ಬಾಡದೇ ಭರವಸೆಗಳನ್ನು ಹುಸಿಮಾಡುವುದು ಎಲ್ಲ ಒಂದು ಕ್ಷಣ ನಿಂತು ಮುಂದೆ ಸಾಗುವಂತೆ ಮಾಡಿತು. ರಾತ್ರಿಯ ನಕ್ಷತ್ರಗಳು ಸ್ಪಾಟ್ಲೈಟುಗಳಾಗಿ ಬಿಟ್ಟಾಗಲಂತೂ ಕವಿತೆ ಹೊಸ ಮಗ್ಗಲಿಗೆ ಹೊರಳಿಕೊಂಡಂತೆನಿಸಿತು. ನಿಮ್ಮ ’ನಿತ್ಯ ಮುತ್ತೈದೆ’, ’ಬೊಗಸೆ ಕಂಗಳಿಗೊಂದು ಬಿನ್ನಹ’ ಗಳನ್ನು ಮಾತ್ರ ಓದಿದ್ದೆ ಹಿಂದೆ..

ಶ್ರೀನಿಧಿ.ಡಿ.ಎಸ್ ಹೇಳಿದರು...

ಈಗಲೂ ಹಾಂಗೇ ಅನ್ಸತ್ತೇನೋ? -ಪದವಿಲಿ ಇದ್ ಹಾಂಗೆ?:)

Narayan Bhat ಹೇಳಿದರು...

ಅದರೂ ನೀವು ಕನಸ ಕಾಣದಿರುವುದು ತರವಲ್ಲ....ನಿಮ್ಮ ಕನಸುಗಳಿಗಿಲ್ಲಿ ಬೇಡಿಕೆ ಇದೆ.... ಕವನ ಚೆನ್ನಾಗಿದೆ.

ಗಿರಿ ಹೇಳಿದರು...

hmmm.. gamya(target) super guru...

santosh naik ಹೇಳಿದರು...

kartik ji tumba cennagide.