1959ರಲ್ಲಿ ಇರಾನ್ ರಾಜಧಾನಿ ಟೆಹ್ರಾನ್ನ ಮಧ್ಯಮ ವರ್ಗದಲ್ಲಿ ಮಜಿದ್ ಮಜಿದಿ ಹುಟ್ಟಿದ್ದು. ತನ್ನ ಹದಿನಾಲ್ಕನೇ ವಯಸ್ಸಿಗೆ ಹವ್ಯಾಸಿ ನಾಟಕ ಕಂಪೆನಿಗಳಲ್ಲಿ ನಟಿಸಲು ಪ್ರಾರಂಭಿಸಿದ್ದ ಬಾಲಕ ಮಜಿದಿ. ನಂತರದ ದಿನಗಳಲ್ಲಿ ಟೆಹ್ರಾನ್ನಲ್ಲಿರುವ "ಇನ್ಟ್ಸಿಟ್ಯೂಟ್ ಆಫ್ ಡ್ರಾಮಾಟಿಕ್ ಆರ್ಟ್ಸ್"ನಲ್ಲಿ ಕಲಿಕೆ ಮುಂದುವರಿಕೆ. 1979ರಲ್ಲಿ ನಡೆದ "ಇರಾನ್ ಕ್ರಾಂತಿ" ಮಜಿದ್ ಮಜಿದಿಯ ಜೀವನವನ್ನೇ ಬದಲಿಸಿತು (ಶಾ ಮೊಹಮ್ಮದ್ ರೆಜಾ ಪಲ್ಹವಿಯ ರಾಜಪ್ರಭುತ್ವವನ್ನು ಮುರಿದು ಮುಸ್ಲಿಂ ಪ್ರಜಾಪ್ರಭುತ್ವ ಸ್ಥಾಪನೆಗೆ ಕ್ರಾಂತಿ ನಾಂದಿಯಾತು. ಇದರ ನೇತೃತ್ವ ವಹಿಸಿದ್ದು ಆಯೋತೊಲ್ಲ ಖೊಮೇನಿ).
ಸಿನಿಮಾವನ್ನು ಇಷ್ಟ ಪಡುತ್ತಿದ್ದ ಮಜಿದಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗಲು ಪ್ರಾರಂಭವಾಯಿತು. 1081ರಿಂದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರೂ, 1985ರಲ್ಲಿ ಮೊಹ್ಸೀನ್ ಮಕ್ಮಲ್ಬಫ್ ನಿರ್ದೇಶನದ ಮೊದಲ ಚಿತ್ರ "ಬಾಯ್ಕಾಟ್"ನಲ್ಲಿ ನಾಯಕನಾಗಿ ನಟಿಸುವುದರೊಂದಿಗೆ ಹೆಸರು, ಅವಕಾಶ ಎರಡೂ ಸಿಕ್ಕಿತು. ಮಕ್ಮಲ್ಬಫ್ ನ ಜೀವನಕ್ಕೆ ಹತ್ತಿರವಾಗಿದ್ದ
ಈ ಕತೆಯಲ್ಲಿ ಇರಾನ್ ಕ್ರಾಂತಿ ಪೂರ್ವ ವಾತಾವರಣದಲ್ಲಿ ಕಥಾ ನಾಯಕ ತನ್ನ ಕಮ್ಯುನಿಷ್ಟ್ ನಿಲುವು
ಗಳಿಂದಾಗಿ ಮರಣದಂಡನೆಗೆ ಗುರಿಯಾಗುತ್ತಾನೆ.
ಈ ಸಿನಿಮಾ ನಂತರ ಕೆಲವು ಸಿನಿಮಾಗಳಲ್ಲಿ ಮಜಿದಿಯ ನಟನೆ ಮುಂದುವರಿಯಿತು. ಕ್ರಮೇಣ ಕಿರುಚಿತ್ರಗಳತ್ತ ಆಸಕ್ತಿ ಹೊರಳಿತು.
1993ರಲ್ಲಿ "ಬದುಕ್" ಸಿನಿಮಾದ ಮೂಲಕ ಮಜಿದ್ ಮಜಿದಿಯ ನಿರ್ದೇಶನದ ಬದುಕು ಶುರುವಾಯಿತು. ಮಕ್ಕಳ ಜೀತದ ಕಥೆ ಹೊಂದಿದ್ದ ಈ ಸಿನಿಮಾ ಇರಾನಿನಲ್ಲೇ ಬ್ಯಾನ್ ಆಗುವ ಭೀತಿಯಿತ್ತು ಎಂದು ಮಜಿದಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ನಂತರ ಮಜಿದಿಯ ಚಿತ್ರಯಾತ್ರೆ ನಿರಾತಂಕವಾಗಿ ಸಾಗಿತು. "ದಿ ಫಾದರ್", "ಚಿಲ್ಡ್ರನ್ ಆಫ್ ಹೆವನ್", "ಕಲರ್ ಆಫ್ ಪ್ಯಾರಡೈಸ್", "ಬರನ್", "ದಿ ವಿಲ್ಲೋ ಟ್ರೀ" ಸಿನಿಮಾಗಳನ್ನು ನಿರ್ದೇಶಿಸಿದರು. ಇತ್ತೀಚೆಗೆ ನಿರ್ದೇಶಿಸಿದ ಸಿನಿಮಾ "ದಿ ಸಾಂಗ್ ಆಫ್ ಸ್ಪ್ಯಾರೋಸ್". ಇದರ ಜೊತೆ 4 ಕಿರುಚಿತ್ರ ಹಾಗೂ ಡಾಕ್ಯುಮೆಂಟರಿಗಳನ್ನೂ ನಿರ್ದೇಶಿಸಿದ್ದಾರೆ. ನಟನಾಗಿ ಅಭಿನಯಿಸಿದ ಚಿತ್ರಗಳು 13. ಚಿತ್ರ ಬರಹಗಾರನಾಗಿ 15 ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. 2008ರ ಒಲಿಂಪಿಕ್ಸ್ ಸಂದರ್ಭದಲ್ಲಿ ಚೀನಾ ಸರ್ಕಾರ ಬೀಜಿಂಗ್ ನಗರವನ್ನು ಪರಿಚಯಿಸುವ ಡಾಕ್ಯುಮೆಂಟರಿ ನಿರ್ಮಾಣಕ್ಕೆ ವಿಶ್ವದ 5 ಸಿನಿಮಾ ನಿರ್ದೇಶಕರನ್ನು ಆಹ್ವಾನಿಸಿತ್ತು. ಅದರಲ್ಲಿ ಮಜಿದ್ ಮಜಿದಿ ಸಹ ಒಬ್ಬರು. ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು ಮಜಿದಿ ಸಿನಿಮಾಗಳಿಗೆ ಬಂದಿವೆ.
2 ಕಾಮೆಂಟ್‌ಗಳು:
nimma baraha chennagide.uttamavada mahitiyannu hondide..gud keep it up..
nimma baraha chennagide.uttamavada mahitiyannu hondide..gud keep it up..
ಕಾಮೆಂಟ್ ಪೋಸ್ಟ್ ಮಾಡಿ