ಬುಧವಾರ, ಏಪ್ರಿಲ್ 22, 2009

ಇರಾನಿನಲ್ಲಿ ಸಿನಿಮಾ ಸುಲಭದ ಮಾತಲ್ಲ


ಧಾರ್ಮಿಕತೆಯ ಹಿಡಿತ ಇರಾನಿನಲ್ಲಿ ಚಿತ್ರಗಳನ್ನೂ ಬಿಟ್ಟಿಲ್ಲ. ಪಾಶ್ಚಾತ್ಯ ಸಿನಿಮಾಗಳು ಇಲ್ಲಿ ಯಾವತ್ತಿಗೂ ಬ್ಯಾನ್.
ಕುಡಿತ, ಪ್ರೇಮಿಗಳ ಸರಸ-ಸಲ್ಲಾಪ, ಕಡಿಮೆ ಬಟ್ಟೆ ಧರಿಸಿದ ಮಹಿಳೆ ಎಲ್ಲದಕ್ಕೂ ಇಲ್ಲಿ ಕತ್ತರಿ. ಪ್ರದರ್ಶನಕ್ಕೆ ಅಯೋಗ್ಯ.

ವರ್ಷದಲ್ಲಿ 8ರಿಂದ 10 ಹಾಲಿವುಡ್ ಸಿನಿಮಾಗಳು ಥಿಯೇಟರ್ಗಳಲ್ಲಿ ಪ್ರದರ್ಶನ ಕಂಡರೇನೇ ಹೆಚ್ಚು. ಇಲ್ಲಿ ಸೆನ್ಸಾರ್ ಮಂಡಳಿ ಕತ್ತರಿ ಆಡಿಸಿದ ಸಮಕಾಲೀನ ಹಾಲಿವುಡ್ ಕ್ಲಾಸಿಕ್ ಸಿನಿಮಾಗಳು ಮಾತ್ರ ಟಿವಿಯಲ್ಲಿ ಪ್ರದರ್ಶನ ಕಾಣುತ್ತವೆ. 

ಬಹುತೇಕ ಭಾರತದಂತೆಯೇ ಅಲ್ಲಿ ಕೂಡಾ ಕಮರ್ಷಿಯಲ್ ಮತ್ತು ಕಲಾತ್ಮಕ ಎನ್ನುವ ಎರಡು ಪಂಗಡಗಳಿವೆ. ಸರ್ಕಾರ ಸಿನಿಮಾ ನಿರ್ಮಾಣದ ಮೇಲೆ ಕಣ್ಣಿಟ್ಟೇ ಇರುತ್ತದೆ.

ಇರಾನಿನ 53 ಮಿಲಿಯನ್ ಜನರ ಭಾಷೆ ಪರ್ಶಿಯನ್. ಹಾಗಾಗಿ ಇದೇ ಅಧಿಕ ಭಾಷೆಯಲ್ಲಿ ಚಿತ್ರಗಳು ತಯಾರಾಗುತ್ತವೆ.

ವರ್ಷಕ್ಕೆ ಹೆಚ್ಚುಕಮ್ಮಿ 130 ಚಿತ್ರಗಳು ತಯಾರಾಗುತ್ತವೆ. ಕಾಮಿಡಿ, ರೊಮ್ಯಾಂಟಿಕ್ ಮೆಲೋಡ್ರಾಮಾ ಮತ್ತು ಕೌಟುಂಬಿಕ ಕಾಮಿಡಿ ಚಿತ್ರಗಳೇ ಹೆಚ್ಚು.

ಕಮರ್ಶಿಯಲ್ ಸಿನಿಮಾಗಳಿಗೆ 25 ವರ್ಷದೊಳಗಿನವರು ಮುಖ್ಯ ಟಾರ್ಗೆಟ್. ಸ್ಥಳೀಯ ಪ್ರೇಕ್ಷಕರೇ ಆಧಾರ. ಮೊಹಮ್ಮದ್ ಅಲಿ ಫರ್ದೀನ್ ಅಲ್ಲಿನ ಪ್ರಸಿದ್ಧ ಕಮರ್ಶಿಯಲ್ ಹೀರೋ ಆಗಿದ್ದಾತ.

ಕಲಾತ್ಮಕ ಸಿನಿಮಾಗಳು ಹೆಚ್ಚಾಗಿ ಥಿಯೇಟರ್ಗಳಲ್ಲಿ ಪ್ರದರ್ಶನ ಕಾಣುವುದಿಲ್ಲ. ಆದರೆ ಕೆಲವಾರು ಸಿನಿಮಾಗಳು ಹೌಸ್ಫುಲ್ ಪ್ರದರ್ಶನ ಕಂಡ ಉದಾಹರಣೆಗಳಿವೆ.

ನಮ್ಮಲ್ಲಿರುವಂತೆ ಅಲ್ಲಿಯೂ ಪೈರಸಿ ಹುಲುಸಾಗಿಯೇ ಬೆಳೆದಿದೆ. ಆದ್ದರಿಂದ ಕಲಾತ್ಮಕ ಸಿನಿಮಾಗಳ ಪೈರೇಟೆಡ್ ಡಿವಿಡಿಗಳು ಸುಲಭಾಗಿ ಸಿಗುತ್ತವೆ.

ಅರಬ್ ಮತ್ತು ಭಾರತೀಯ ಸಿನಿಮಾಗಳೆಡೆಗೆ ಇರಾನಿಯರಿಗೆ ಅಷ್ಟಾಗಿ ಆಸಕ್ತಿ ಇಲ್ಲ. ಕಳೆದ ಎಂಟು ವರ್ಷಗಳಲ್ಲಿ ಈ ಎರಡೂ ದೇಶಗಳ ಒಂದೇ ಒಂದು ಸಿನಿಮಾ ಕೂಡಾ ಪ್ರದರ್ಶನ ಕಂಡಿಲ್ಲ.


ಇರಾನಿಗೆ ಸಿನಿಮಾ ಬಂದದ್ದು:

ಪರ್ಶಿಯನ್ನರ ದೃಶ್ಯ ಮಾಧ್ಯಮಕ್ಕೆ ಸುದೀರ್ಫ ಇತಿಹಾಸವಿದೆ. ಕ್ರಿ.ಪೂ 500ರಿಂದ ದೃಶ್ಯ ಅಭಿವ್ಯಕ್ತಿ ಪ್ರಾರಂಭವಾಯಿತು ಎನ್ನುವುದಕ್ಕೆ ದಾಖಲೆಗಳಿವೆ. ದೃಶ್ಯ ಕಲೆ, ಆಲಂಕಾರಿಕ ಕಲೆ, ಸಾಹಿತ್ಯ, ಕಟ್ಟಡ ನಿರ್ಮಾಣ, ನೃತ್ಯ, ಸಂಗೀತ ಎಲ್ಲದರಲ್ಲೂ ಪರ್ಶಿಯನ್ನರು ಛಾಪು 
ಮೂಡಿಸಿದವರು.

20ನೇ ಶತಮಾನದಲ್ಲಿ ಸಿನಿಮಾ ಪರ್ಶಿಯನ್ನರಿಗೆ ಭಾವನೆಗಳ ಅಭಿವ್ಯಕ್ತಿಗೆ ಸೂಕ್ತ ದಾರಿಯಾಗಿ ಕಂಡಿತು.
ಪಲ್ಹವಿ ಸಾಮ್ರಾಜ್ಯಕ್ಕಿಂತ ಮೊದಲು ಪರ್ಶಿಯಾವನ್ನು ಆಳಿದ್ದ ಮುಜಫರ್ ಅಲ್ ದಿನ್ ಶಾ 1900ರಲ್ಲಿ ಪ್ಯಾರೀಸ್ಗೆ ಭೇಟಿಕೊಟ್ಟಾಗ ಕ್ಯಾಮರಾವೊಂದನ್ನು ತಂದರು. ಇದೇ ಇರಾನಿನ ಸಿನಿಮಾ ನಿರ್ಮಾಣಕ್ಕೆ ಪ್ರಾರಂಭಿಕ ಹೆಜ್ಜೆಯಾಯಿತು. 2001ರಲ್ಲಿ ಇರಾನ್ ಸಿನಿಮಾ ನೂರು ವರ್ಷಗಳ ಸಂಭ್ರಮವನ್ನು ಆಚರಿಸಿತು.

ಚೀನಾ ಮತ್ತು ಇರಾನ್ ತೊಂಭತ್ತರ ದಶಕದಿಂದೀಚೆಗೆ ವಿಶ್ವ ಕಂಡ "ಮಾನವೀಯ ಸ್ಪಂದನೆಗಳ ಚಿತ್ರಗಳ ಗೂಡು" ಎನ್ನುತ್ತಾರೆ ಹಲವಾರು ಚಿತ್ರ ವಿಮರ್ಶಕರು.

8 ಕಾಮೆಂಟ್‌ಗಳು:

ತಿಪ್ಪೇಸ್ವಾಮಿ ನಾಕೀಕೆರೆ ಹೇಳಿದರು...

Karthik anna nimma blogina prathi hejje yu chennagide. sakaastu vishaya ide. nannadu ondu blog ide nodi hegirabeku heli.
my blog. www.maardhani.blogspot.com

Thippeswamy Ujire

ತಿಪ್ಪೇಸ್ವಾಮಿ ನಾಕೀಕೆರೆ ಹೇಳಿದರು...

Karthik anna nimma blogina prathi hejje yu chennagide. sakaastu vishaya ide. nannadu ondu blog ide nodi hegirabeku heli.
my blog. www.maardhani.blogspot.com

Thippeswamy Ujire

ಮಹೇಶ್ ಪಿ ಹೇಳಿದರು...

this is really informative. thanks for the article. i expect more from u about irani movies

ಧರಿತ್ರಿ ಹೇಳಿದರು...

ಕನ್ನಡಪ್ರಭದಲ್ಲಿ ಓದ್ತಾ ಇದ್ದೀನಿ ನಿಮ್ಮ ಲೇಖನಗಳು.
ಹೀಗೇ ಮುಂದುವರೆಯಲಿ
-ಧರಿತ್ರಿ

Guruprasad ಹೇಳಿದರು...

ಹಾಗೆ ನಮ್ಮ ಬ್ಲಾಗಿನ ಗೆಳೆಯರ ಕೊಂಡಿ ಇಂದ ನಿಮ್ಮ ಬ್ಲಾಗಿಗೆ ಬಂದೆ....
ತುಂಬ ಚೆನ್ನಾಗಿ ವಿವರಿಸಿದ್ದಿರ ಇರಾನಿನ ಸಿನಿಮ ಪ್ರಪಂಚವನ್ನು,,, ಆದರೆ ಇರಾನಿ ನಲ್ಲಿ ಒಳ್ಳೆ ಸಿನಿಮ ಗಳು ನಿರ್ಮಾಣ ಗೊಳ್ಳುತ್ತವೆ ಅಂತ ಕೇಳಿದ್ದೆ .
ಒಳ್ಳೆ ಮಾಹಿತಿ ಲೇಖನ .....
ಬಿಡುವಾಗಿದ್ದಾಗ ನನ್ನ ಬ್ಲಾಗಿಗೂ ಒಮ್ಮೆ ಬಂದು ಹೋಗಿ.....
ಗುರು

srujan ಹೇಳಿದರು...

ಕಾರ್ತಿಕ್
ಈಗ ನಿನ್ನ ಬ್ಲಾಗ್ ನೋಡಿದೆ.
ತುಂಬ ಕಲಾತ್ಮಕವಾಗಿದೆ.ಬ್ಲಾಗ್ ತುಂಬಾ ಸಿನಿಮಾ ಬಗ್ಗೆನೇ ಇರೋದ್ರಿಂದ ಬಹಳ ಖುಷಿಯಾಗಿದೆ.
ಆ ಪೋಸ್ಟರ್ 'ಬಾರನ್' ಮತ್ತು 'ಚಿಲ್ಡ್ರನ್ ಆಫ್.. 'ಸಿನಿಮಾಗಳದ್ದು ತಾನೇ?
ನಾನು ಅಷ್ಟೇ ಇರಾನ್ ಬಗ್ಗೆ ಈತರದ ಸಾಂಸ್ಕೃತಿಕ ಉತ್ಕೃಷ್ಟತೆ ಬಗ್ಗೆ ಗೊತ್ತಿರಲಿಲ್ಲ.
ಹಾಗೆ ನೋಡಿದರೆ ಜಗತ್ತಿನ ಅತ್ಯಂತ ಶ್ರೇಷ್ಠ ಕಾರ್ಟೂನುಗಳು ಇರಾನ್ ನಲ್ಲೆ ಹುಟ್ಟುತ್ತವೆ.ನೋಡು.
ಅಲ್ಲಿ ಕಾರ್ಟೂನುಗಳು ಕಲಾಕೃತಿಯಷ್ಟೇ ಶ್ರೆಷ್ಟವಾಗಿರುತ್ತವೆ.
ಅವರ ಅಭಿರುಚಿ ನಿಜಕ್ಕೂ ಗ್ರೇಟ್ ಅಲ್ಲವಾ ?

ಹೊಸ ಜಗತ್ತನ್ನು ಪರಿಚಯಿಸಿದ್ದಕ್ಕೆ ಋಣಿ.

ಸೃಜನ್

ರವಿರಾಜ್ ಆರ್.ಗಲಗಲಿ ಹೇಳಿದರು...

sir blog layout, writing chennagide, keep it up...nanna blog kooda nodi http://ravirajgalagali.blogspot.com

muniraja renjala ಹೇಳಿದರು...

priya karthik..
evattu modala baarige ninna bloge nodide.abinandanegalu mattu shubashayagalu. ninna bhavanegalu, aalochana krama ujwala bavisyavannu soochisuttave.hudugaa..belayuttiru.. belaguttiru.o.k.
best of luck. yours..muniraja renjal.