ಭಾನುವಾರ, ಏಪ್ರಿಲ್ 12, 2009

ಫಸ್ಟ್ ಹಾಫ್ ಮುಗಿದಿದೆಜಿದ್ ಮಜಿದಿಯ ಫಸ್ಟ್ ಹಾಫ್ ಮುಗಿದಿದೆ. ಎಪ್ರಿಲ್ 17ಕ್ಕೆ ಭರ್ತಿ ಐವತ್ತು ವರ್ಷ.
 
ಮಜಿದಿ ಹೆಸರು ಗೊತ್ತಿಲ್ವಾ?
ಕೊನೆ ಪಕ್ಷ "ಚಿಲ್ಡ್ರನ್ ಆಫ್ ಹೆವನ್" ಸಿನಿಮಾ ನೆನಪಿದೆಯಾ? 
ಬಡ ಕುಟುಂಬದ ಅಣ್ಣನೊಬ್ಬ ತನ್ನ ತಂಗಿಗೆ ಶೂ ಕೊಡಿಸಲು ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಕತೆ ಹೊಂದಿದ್ದ ಸಿನಿಮಾ-"ಚಿಲ್ಡ್ರನ್ ಆಫ್ ಹೆವನ್". ಇದನ್ನು ನಿರ್ದೇಶಿಸಿದ್ದು ಮಜಿದ್ ಮಜಿದಿ. 1998ರಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯ ಮೆಟ್ಟಿಲೇರಿದ್ದ ಇರಾನಿ ಸಿನಿಮಾವಿದು. ನಿನ್ನೆ ಮೊನ್ನೆಯಷ್ಟೇ ವಿಶ್ವದ ವಿವಿಧ ಭಾಷೆಯ ಸಿನಿಮಾ ನೋಡಲು ಪ್ರಾರಂಭಿಸಿದವರಿಗೆ ಹೆಚ್ಚಿನವರು ಈ ಸಿನಿಮಾವನ್ನು ನೋಡಲು ಮರೆಯದಿರಿ ಎನ್ನುತ್ತಾರೆ.

ಇವತ್ತು ಇರಾನ್ ಸಿನಿಮಾ ಅಂದ ತಕ್ಷಣ ಅಬ್ಬಾಸ್ ಕಿಯಾರಸ್ತೋಮಿ, ಮೊಹ್ಸೀನ್ ಮಕ್ಮಲ್ಬಫ್, ಜಾಫರ್ ಪನಾಹಿ ಜೊತೆಗೆ ನೆನಪಾಗುವ ಹೆಸರು ಮಜಿದ್ ಮಜಿದಿಯದ್ದು. ಹೊಸ ಅಲೆಯ ಇರಾನಿ ಸಿನಿಮಾ ನಿರ್ಮಾಣದಲ್ಲಿ ಇವರದ್ದು ವಿಶ್ವಕ್ಕೆ ಪರಿಚಿತ ಹೆಸರು.
ದರಿಯಸ್ ಮೆಹ್ರ್ಜುಯಿ 1969ರಲ್ಲಿ "ದಿ ಕೌ" ಸಿನಿಮಾ ನಿರ್ದೇಶಿಸುವುದರೊಂದಿಗೆ ಹೊಸ ಅಲೆಯ ಚಿತ್ರಗಳು ಇರಾನಿನಲ್ಲಿ ಪ್ರಾರಂಭವಾದವು.  ಇಂದು ಇರಾನಿನಲ್ಲಿ ಈ ರೀತಿಯ ಸಿನಿಮಾ  ನಿರ್ದೇಶಿಸುವವರ ಪಟ್ಟಿ ದೊಡ್ಡದಿದೆ. ಹೊಸ ಅಲೆಯ ಇರಾನಿ ಸಿನಿಮಾಗಳು ಯುರೋಪಿನ ಕಲಾತ್ಮಕ ಸಿನಿಮಾಗಳನ್ನು, ಮುಖ್ಯವಾಗಿ "ಇಟಾಲಿಯನ್ ನಿಯೋರಿಯಲಿಜಂ" ಗುಣಗಳನ್ನು ಹಂಚಿಕೊಂಡಿವೆ. 

ಮಜಿದಿಯ ಫಸ್ಟ್ ಹಾಫ್ ಮುಗಿದಿದೆ ಅನ್ನುವುದಕ್ಕಿಂತ ಮತ್ತೊಂದು ಫಸ್ಟ್ ಹಾಫ್ ಪ್ರಾರಂಭವಾಗುತ್ತಿದೆಯಲ್ಲ ಎಂದು ಖುಷಿಯಾಗುತ್ತದೆ.
ಮಜಿದ್ ಮಜಿದಿಗೆ ಪ್ರೀತಿಯಿಂದ "ಹ್ಯಾಪಿ ಬರ್ತ್ ಡೇ"  ಹೇಳೋಣ ಬನ್ನಿ .....

(ಮಜಿದಿಯ ಸಿನಿಮಾ ಮತ್ತು ಬದುಕಿನ ಕುರಿತ ಬರಹಗಳು ಕೆಳಗಿವೆ.ಓದಿ ಬಿಡಿ)

4 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

http://www.vogmall.com/LOW PRICE BUT HIGH Quality ,Nike shoes Adidas shoes ,Air Jordan 2009 shoes LV Handbag ,we will give you high quality products
and service ,welcome !

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಕಾರ್ತಿಕ್,
ನನ್ನ ಫೇವರೇಟ್ ಡೈರೆಕ್ಟರ್ ಮಜಿದಿ ಬಗ್ಗೆ ಬರೆದಿರುವಿರಿ. ನನ್ನ ಕಡೆಯಿಂದಲೂ ಆತನಿಗೆ Happy Birthday. ನಿಮ್ಮ ಲೇಖನ ಕನ್ನಡಪ್ರಭದಲ್ಲೂ ಓದಿದೆ. ತುಂಬಾ ಚೆನ್ನಾಗಿದೆ.

shivu.k ಹೇಳಿದರು...

ಮಾಜಿದ್ ಮಜಿದಿ...ನನ್ನ ಫೇವರೇಟ್...ಆತನ ಬಗೆಗೆ ಅರ್ಥಪೂರ್ಣ ಲೇಖನ ಅವನ ಚಿತ್ರೀಕರಣ ವಿಧಾನದ ಬಗ್ಗೆ ಉಪಯುಕ್ತ ಮಾಹಿತಿ..
ಆತನಿಗೆ ಹುಟ್ಟು ಹಬ್ಬದ ಶುಭಾಶಯಗಳು...

Ittigecement ಹೇಳಿದರು...

ಕಾರ್ತಿಕ್....

ಚಿಲ್ಡ್ರನ್ ಆಫ್ ಹ್ಯಾವನ್" ಚಿತ್ರ ಮಾತ್ರ ನೋಡಿದ್ದೀನಿ...
ಅದ್ಭುತ ಸಿನೇಮಾ..
ಪ್ರತಿಭಾವಂತ ನಿರ್ದೇಶಕ...

ಬದುಕಿಗೆ ಹತ್ತಿರವಿರುವ ಇನ್ನಷ್ಟು ಸಿನೇಮಾ ಮಾಡಲಿ..

ಅವರಿಗೆ ಜನ್ಮದಿನದ ಶುಭಾಶಯಗಳು...