ನೂಪುರ ಭ್ರಮರಿಗೀಗ ಎರಡು ವರ್ಷದ ಸಂಭ್ರಮ.
ನರ್ತನ ಜಗತ್ತಿಗೆ ಮೀಸಲಾದ ಪತ್ರಿಕೆ ಇದು. ಹೆಜ್ಜೆ-ಗೆಜ್ಜೆ, ಭಾವ-ಭಂಗಿಗಳ ಬಗ್ಗೆ ಚರ್ಚಿಸುತ್ತಾ ಬೆಳೆದು ಬಂದ ಖಾಸಗಿ ಪ್ರಸಾರದ ಪತ್ರಿಕೆ ನೂಪುರ ಭ್ರಮರಿ. ಎರಡು ವರ್ಷಗಳ ಹಿಂದೆ ಜೆರಾಕ್ಸ್ ಪ್ರತಿಯಾಗಿ ಪ್ರಾರಂಭವಾದ ಪತ್ರಿಕೆ ಇವತ್ತು ಮುದ್ರಣದ ಹಂತಕ್ಕೆ ಬಂದು ಗೆಜ್ಜೆ ಕಟ್ಟಿ ಕುಣಿತ ಮುಂದುವರಿಸಿದೆ. ಸ್ವಂತದ್ದೊಂದು ವೆಬ್ಸೈಟನ್ನೂ ಹೊಂದಿದೆ.
ನೂಪುರ ಭ್ರಮರಿಯನ್ನು ಹೊರತರುವಲ್ಲಿ ಎದ್ದು ಕಾಣುವುದು ಸಂಪಾದಕಿ ಮನೋರಮಾ ಬಿ.ಎನ್ ಅವರ ನೃತ್ಯ ಪ್ರೀತಿ. ಜೊತೆಗೆ ಪತ್ರಿಕೋದ್ಯಮ ಉಪನ್ಯಾಸಕಿಯಾಗಿರುವುದರಿಂದ ಬರಹವನ್ನು ನೃತ್ಯ ಪ್ರಸಾರಕ್ಕೆ ಆಯ್ದುಕೊಂಡಿದ್ದಾರೆ.
ಈ ಪತ್ರಿಕೆಯ ಹಿಂದೆ ಲಾಭಕ್ಕಿಂತ ಹೆಚ್ಚಾಗಿ ಅಕ್ಕರೆಯಿದೆ. ಭಿನ್ನವಾಗಿ ಪತ್ರಿಕೆಯೊಂದನ್ನು ಮಾಡಬೇಕು ಎನ್ನುವ ಕಳಕಳಿಯಿದೆ.
ಚಂದಾದಾರರು ಹಾಗೂ ಸ್ವಂತ ಖರ್ಚಿನಿಂದ ಪತ್ರಿಕೆ ನಡೆಸುತ್ತಿದ್ದಾರೆ.
ನೂಪುರದಂತಹ ಪುಟ್ಟ ಪ್ರಯತ್ನಗಳ ಹಿಂದೆ ಅದಮ್ಯ ಕನಸುಗಳಿರುತ್ತವೆ. ಈ ಪ್ರಯತ್ನವನ್ನು ಮುಂದುವರಿಸಲು ನಾವೂ ಅವರ ಬೆನ್ನಿಗಿರೋಣ, ಪ್ರೋತ್ಸಾಹ ತುಂಬೋಣ. ಚಂದಾದಾರರಾಗುವ ಮೂಲಕ ಗೆಜ್ಜೆಯ ಜೊತೆ ನಮ್ಮದೊಂದು ಹೆಜ್ಜೆಯಿರಲಿ.
ಇದು ನೂಪುರ ಭ್ರಮರಿಯ ವೆಬ್ ಸೈಟ್ ಕೊಂಡಿ:
ಇ-ಮೈಲ್ ವಿಳಾಸ:
feedback@noopurabhramari.com
editor@noopurabhramari.com
ಮೊಬೈಲ್: 9964140927
1 ಕಾಮೆಂಟ್:
ಕಾರ್ತಿಕ್,
ನೂಪುರ ಭ್ರಮರಿ ಎಂಬ ಪತ್ರಿಕೆ ಬಗ್ಗಿ ತಿಳಿಸಿದ್ದಕ್ಕೆ ಧನ್ಯವಾದಗಳು. ಇದರ ಬಗ್ಗೆ ಆಸಕ್ತಿ ಇರುವವರಿಗೆ ಖಂಡಿತ ತಿಳಿಸುವೆ.
ಕಾಮೆಂಟ್ ಪೋಸ್ಟ್ ಮಾಡಿ