ಭಾನುವಾರ, ಮಾರ್ಚ್ 15, 2009

ಪ್ರೀತಿಯ ರೇಷ್ಮೆ ನೇಯುವವನ ಕಥೆ...

ಕಾಂಚೀವರಂ ಸಿನಿಮಾ ಸ್ವಾತಂತ್ರ್ಯಪೂರ್ವದ ನೇಕಾರನ ಕಥೆ. ಮಗಳ ಮೇಲಿನ ಪ್ರೀತಿಗೆ ಆಕೆಗಾಗಿ ರೇಷ್ಮೆ ಸೀರೆ ನೇಯಲು ಪ್ರಯತ್ನಿಸುವ ಅಸಹಾಯಕ ಅಪ್ಪನ ಆತ್ಮೀಯ ಸ್ಪಂದನೆ.

ನೇಯುವುದು ರೇಷ್ಮೆಯಾದರೂ ಮನೆ ತುಂಬಾ ಬಡತನ. ಮಾಲೀಕ ಕೊಡುವ ಬಿಡಿಗಾಸಿಗೆ ತೃಪ್ತಿಪಟ್ಟುಕೊಳ್ಳಬೇಕು. ಅಕ್ಷರಶಃ ಜೀತದ ಬದುಕು. ಈ ನಿತ್ಯ ಜಂಜಡಗಳ ನಡುವೆ ಆತನಿಗೆ ಮದುವೆಯಾಗುತ್ತದೆ. ಮುದ್ದಾದ ಹೆಣ್ಣು ಮಗು ಹುಟ್ಟುತ್ತದೆ.  ಮಗುವಿಗೆ ಮೊದಲ ಸಲ ಒಳ್ಳೆಯಿಂದ ಹಾಲು ಕುಡಿಸುವಾಗ “ಭವಿಷ್ಯದಲ್ಲಿ ಮಗುವಿಗೆ ತಾನೇನು ನೀಡುತ್ತೇನೆ” ಎಂದು ಹೇಳಿಕೊಳ್ಳುವುದು ಸಂಪ್ರದಾಯ. ಆತ ಮಗುವಿನ ಕಿವಿಯಲ್ಲಿ “ರೇಷ್ಮೆ ಸೀರೆಯಲ್ಲೇ ನಿನ್ನ ಮದುವೆ ಮಾಡುತ್ತೇನೆ” ಎನ್ನುತ್ತಾನೆ.  ಮೈತುಂಬಾ ಬಡತನ ಎನ್ನುವುದು ಊರಿನವರಿಗೆಲ್ಲಾ ಗೊತ್ತು. ಹೆಂಡತಿ ಸೇರಿದಂತೆ ನೆರೆದಿದ್ದವರಿಗೆಲ್ಲಾ ಈತನ ಮಾತು ಕೇಳಿ ಆಶ್ಚರ್ಯ.ಈ ಉದ್ದೇಶ ಈಡೇರಿಕೆಗೆ ಆತ ಕಳ್ಳನಾಗುತ್ತಾನೆ. ತಾನು ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಬಾಯಲ್ಲಿ ರೇಷ್ಮೆ ನೂಲಿನ ಉಂಡೆಯನ್ನು ಇಟ್ಟುಕೊಂಡು ಹೋಗುತ್ತಾನೆ. ರಾತ್ರೆಯಿಡೀ ಹೆಂಡತಿ ಮಕ್ಕಳಿಗೆ ಗೊತ್ತಾಗದಂತೆ ಮನೆ ಹಿಂಬದಿಯ ಶೆಡ್ಡಿನಲ್ಲಿ ಸೀರೆ ನೇಯುತ್ತಾ ಕೂರುತ್ತಾನೆ. ಸತತ ಹದಿನಾರು ವರ್ಷ ನಿತ್ಯ ಕಾಯಕವೆಂಬಂತೆ ಚಾಚೂ ತಪ್ಪದೇ ನಡೆಯುತ್ತದೆ ಈ ಪ್ರಕ್ರಿಯೆ.

ಈ ಮಧ್ಯೆ ಹೆಂಡತಿ ತೀರಿ ಹೋಗುತ್ತಾಳೆ. ಮಗಳು ಬೆಳೆದು ನಿಲ್ಲುತ್ತಾಳೆ. ತಮಗೆ ಸವಲತ್ತುಗಳನ್ನು ನೀಡಬೇಕೆಂದು ಮಾಲೀಕನ ವಿರುದ್ದ ಹೂಡುವ ಧರಣಿಯ ನೇತೃತ್ವ ವಹಿಸುತ್ತಾನೆ. ಅದೇ ಸಮಯದಲ್ಲಿ ಮಗಳ ಮದುವೆ ನಿಶ್ಚಯವಾಗುತ್ತದೆ.  ತಾನೇ ಧರಣಿ ಮುರಿಯುತ್ತಾನೆ. ಹದಿನಾರು ವರ್ಷಗಳಿಂದ ನೇಯುತ್ತಿರುವ ಸೀರೆ ಪೂರ್ತಿಯಾಗಲು ಇನ್ನು ಕೇವಲ ನಾಲ್ಕೇ ನಾಲ್ಕು ದಿನಗಳಿವೆ ಎನ್ನುವಾಗ ಆತ ಸಿಕ್ಕಿ ಬೀಳುತ್ತಾನೆ. ಜೈಲು ಸೇರುತ್ತಾನೆ. ಪೆರೋಲ್ ಮೇಲೆ ಆತ ಹೊರಬರುವಾಗ ಮಗಳಿಗೆ ಪ್ಯಾರಲಿಸಿಸ್. ಆಕೆಯನ್ನು ನೋಡಿಕೊಳ್ಳಲು ಯಾರೂ ದಿಕ್ಕಿಲ್ಲದ್ದರಿಂದ ಕೊನೆಗೆ ತಾನೇ ಕೈಯಾರೆ ವಿಷವುಣಿಸುತ್ತಾನೆ.ಆಗ ಆತನಿಗೆ ನೆನಪಾಗುವುದು ಶೆಡ್ಡಿನಲ್ಲಿ ಆಕೆಗಾಗಿ ನೇಯ್ದು ಪೂರ್ತಿಯಾಗದ ರೇಷ್ಮೆ ಸೀರೆ. ಅದನ್ನು ಹರಿದು ತಂದು ಆಕೆಯ ದೇಹದ ಮೇಲೆ ಹೊದೆಸುತ್ತಾನೆ. ಪಾದ ಕಾಣುತ್ತದೆ. ಅದನ್ನು ಮುಚ್ಚಲು ಸೀರೆ ಎಳೆದಾಗ ತಲೆ ಸೀರೆಯಿಂದ ಹೊರಬರುತ್ತದೆ. ಆಕೆಯ ದೇಹವನ್ನು ಪೂರ್ತಿಯಾಗಿ ಮುಚ್ಚಿಕೊಳ್ಳದೆ ಸೀರೆ ರೇಷ್ಮೆಯಾಗಿ ಉಳಿದುಕೊಳ್ಳುತ್ತದೆ. 

 ಇಂತಹದೊಂದು ಭಾವನಾತ್ಮಕ, ಸತ್ವಶಾಲಿ  ಚೌಕಟ್ಟಿನ ಕಥೆ ಬರೆದದ್ದು ನಿರ್ದೇಶಕ ಪ್ರಿಯದರ್ಶನ್. ಆದರಿದು ಸತ್ವಶಾಲಿ ಸಿನಿಮಾವಾಗುವಲ್ಲಿ ಸೊರಗಿದೆ. ನಿರೂಪಣೆ ಮುಖ್ಯ ಕಾರಣ. ಫ್ಲ್ಯಾಷ್ ಬ್ಯಾಕ್‌ನಲ್ಲಿ ಹೇಳುವ ನೇಕಾರನ ಕಥೆ ಸಿನಿಮಾ ನೋಡುತ್ತಿರುವಂತೆ ನಮ್ಮೊಳಗೆ ಬೆಳೆಯುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಅದೊಂದು ಗಿಮಿಕ್ಕಿನಂತೆ ಕಾಣುತ್ತದೆ.ಸಿನಿಮಾದಲ್ಲಿರುವ ಆ ಕಾಲಘಟ್ಟದ ಸಾಮಾಜಿಕ ಘಟನೆಗಳು ನೇಕಾರನ ನಿತ್ಯ ಬದುಕಿನ ಜೊತೆ ಥಳುಕು ಹಾಕಿಕೊಂಡಾಗ ಗೊಂದಲ ಮೂಡಿಸುತ್ತವೆ. ಇದರ ಬದಲು ಪ್ರಿಯದರ್ಶನ್ ನೇಕಾರನೊಬ್ಬನ ಕಥೆಯನ್ನು ಇತಿಹಾಸದ ಗೋಜಲಿನಿಂದ ಹೊರಗಿಟ್ಟು ನಿರೂಪಿಸಬಹುದಿತ್ತು, ಅಥವಾ ಇತಿಹಾಸವನ್ನು ಸತ್ವಶಾಲಿಯಾಗಿ ಬಳಸಿ ಕಥೆ ಹೇಳಬಹುದಿತ್ತು.( ಇದಕ್ಕೆ ತಕ್ಕ ಉದಾಹರಣೆ ಇಟಾಲಿಯನ್ ಸಿನಿಮಾ “ಲೈಫ್ ಈಸ್ ಬ್ಯೂಟಿಫುಲ್”. ಅಲ್ಲಿ ನಿರ್ದೇಶಕ ರಾಬರ್ಟೋ ಬೆನಿನಿ, ಹಿಟ್ಲರ್‌ನ ನಾಜಿ ಕ್ಯಾಂಪನ್ನು ಜೊತೆಯಲ್ಲಿ ಇಟ್ಟುಕೊಂಡು ಸಿನಿಮಾದ ಕಥೆಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತಾನೆ). ಈ ಎರಡೂ ಕೆಲಸವನ್ನು ಅವರು ಮಾಡುವುದಿಲ್ಲ. ಇದರಿಂದ ಅನ್ಯಾಯವಾಗಿರುವುದು ನೇಕಾರನೊಬ್ಬನ ಕಥೆಗೆ.

 

ಸಿನಿಮಾದುದ್ದಕ್ಕೂ ಇಷ್ಟವಾಗುವುದು ಬ್ಲ್ಯಾಕ್ ಅಂಡ್ ವೈಟ್ ತರಹದ ಕಲರ್ ಫ್ರೇಮಿನಲ್ಲಿ ಕಥೆ ಹೇಳುವ ರೀತಿ. ಜೊತೆಗೆ ಸೀರೆ, ಹೊಲದ ಪೈರು ಹೀಗೆ ಕೆಲವೇ ಕೆಲವು ವಸ್ತುಗಳಿಗೆ ಬಣ್ಣ ತುಂಬಿರುವುದು. ಪ್ರತೀ ಫ್ರೇಮಿನ ವಿನ್ಯಾಸವೇ ಸಿನಿಮಾವನ್ನು ನೋಡುವಂತೆ ಮಾಡುತ್ತದೆ.  ಪ್ರಕಾಶ್ ರೈ ಇಡೀ ಸಿನಿಮಾವನ್ನು ತುಂಬಿಕೊಂಡಿದ್ದಾರೆ! ಈ ಮೊದಲು ತಮಿಳು ನೇಟಿವಿಟಿಯ ಪಾತ್ರಗಳನ್ನು ಅವರು ಮಾಡಿದ್ದರೂ ಇಲ್ಲಿ ಆ ಪಾತ್ರದಲ್ಲೇ ಸೋಲುತ್ತಾರೆ. ಬಹುಶ ಇದಕ್ಕೆ ಪ್ರಿಯದರ್ಶನ್ ಕಾರಣವಿದ್ದರೂ ಇರಬಹುದು!! ಬಾಡಿ ಲಾಂಗ್ವೇಜ್ ವಿಷಯದಲ್ಲಿ ಪ್ರಕಾಶ್ ರೈ ಯಾವತ್ತೂ ಅಚ್ಚುಕಟ್ಟು. ಆದರಿಲ್ಲಿ ಯುವಕ ಹಾಗೂ ವಯಸ್ಕ ನೇಕಾರನ ನಡುವೆ ಇರುವ ವ್ಯತ್ಯಾಸ ಕಂಡು ಹಿಡಿಯಲು ಸ್ವಲ್ಪ ಒದ್ದಾಡಬೇಕು.ಕೆಲವೊಂದು ಸಣ್ಣ ಸಣ್ಣ ಸನ್ನಿವೇಶಗಳು ಖುಷಿ ಕೊಡುತ್ತವೆ. ಉದಾಹರಣೆಗೆ ಹಳ್ಳಿ ಮೊದಲ ಬಾರಿ ಬರುವ ಮೋಟಾರು ಕಾರನ್ನು ನೋಡಲು ಕಾಯುವಾಗ ನಾಯಕ, ಆತನ ಹೆಂಡತಿ, ಮಗಳು ದೂರದ ಗಿಡವೊಂದಕ್ಕೆ ಕಲ್ಲು ಹೊಡೆಯಲು ಪ್ರಯತ್ನಿಸುತ್ತಾ ಟೈಂಪಾಸ್ ಮಾಡುವುದು, ಮೋಟಾರು ನೋಡಲು ಹೋಗುವಾಗ ದಣಿದ ಹೆಂಡತಿಯನ್ನು ಎತ್ತಿಕೊಂಡು ಓಡುವುದು, ಬಸ್ಸಲ್ಲಿ ಪೋಲೀಸ್ ಪೇದೆ ಟೊಪ್ಪಿಗೆ ಲಾಂಛನ ಹಾಕಲು ಒದ್ದಾಡುವುದು. 

 ನಿರ್ದೇಶಕ ಪ್ರಿಯದರ್ಶನ್ ನಾಯಕನಿಗೆ ವಿಪರೀತ ಗಮನ ಕೊಟ್ಟಿರುವುದರಿಂದ ಉಳಿದ ಪಾತ್ರಗಳಿಗೆ ಹೆಚ್ಚು ಕೆಲಸವಿಲ್ಲ. ಜೊತೆಗೆ ಅವುಗಳಿಗಿರುವ ಅವಕಾಶವೂ ಸೀಮಿತ. ನಾಯಕನ ಪಾತ್ರಕ್ಕೆ ಬೆಂಬಲ ಕೊಡಲು ಅಗತ್ಯವಿರುವಷ್ಟು ಮಾತ್ರ ಅವು ಕೆಲಸ ಮಾಡುತ್ತವೆಯೇ ಹೊರತು ಪಾತ್ರವಾಗಿ ಕತೆಯನ್ನು ಕಟ್ಟಿಕೊಡುವುದಿಲ್ಲ. ತಮಿಳಿನಲ್ಲಿ ಈ ತರಹದ ಸಿನಿಮಾ ಒಂದು ಅಪೂರ್ವ ಪ್ರಯೋಗ. ಸದಭಿರುಚಿಯ “ನೋಡಬಲ್ಲ”ಥ ಸಿನಿಮಾಗಳನ್ನು ನಿರ್ಮಿಸುತ್ತಿರುವ ಪ್ರಕಾಶ್ ರೈ ನಿರ್ಮಾಣದ ಸಿನಿಮಾ ಇದು. ಇಷ್ಟೆಲ್ಲಾ ಕೊರತೆಗಳ ಮಧ್ಯೆ ಸಿನಿಮಾ ನಿರ್ಮಾಣದ ಹಿಂದಿರುವ ಪ್ರಯತ್ನ ಇಷ್ಟವಾಗುತ್ತದೆ.ಪ್ರಿಯದರ್ಶನ್ ಅವರ “ಜೀವನ ಶ್ರೇಷ್ಠ ಸಿನಿಮಾ”ವಾಗುವ ಅವಕಾಶ ಹಾಗೂ ಅಪಾಯ ಎರಡೂ ಕಾಂಚೀವರಂ ಸಿನಿಮಾಕ್ಕಿದೆ.

12 ಕಾಮೆಂಟ್‌ಗಳು:

ಆಲಾಪಿನಿ ಹೇಳಿದರು...

ಕಾರ್ತಿಕ್‌, ನಿಮ್ಮ ಸಿನಿಮಾ ಹುಚ್ಚಿಗೆ ಶರಣು. ನನಗೂ ಫಿಲ್ಮ್‌ ನೋಡ್ಬೇಕು ಅನ್ನಸ್ತಿದೆ..

ಅನಾಮಧೇಯ ಹೇಳಿದರು...

good article. film nodabekeniside.

ಮನೋರಮಾ.ಬಿ.ಎನ್ ಹೇಳಿದರು...

ondondasla nim film hucchu kandaga nanadru yake nim tarah aglilvo anta anistade.nim cinema preeeti nanna film preetiginta hegaella vishalavagirbohdu emba yochene ommomme kadi mattashtu olleya film nodbeku anta anistade..nijakku neevobba oleya critic... baravanige seada munduvareyali. kanndakkobba olleya sahrudaya samvedaka sikiddane...

Lakshmi Shashidhar Chaitanya ಹೇಳಿದರು...

I too want to watch the movie. Thanks for the information and review.

ವಿನಾಯಕ ಭಟ್ಟ ಹೇಳಿದರು...

ಸಿನಿಮಾ ಚೆನ್ನಾಗಿಲ್ಲ ಅಂತ ಬರೆದೇ, ಓದಿದವರಿಗೆ ಸಿನಿಮಾ ನೋಡುವ ಆಸೆ ಹುಟ್ಟುವಂತೆ ಮಾಡಿದ್ದೀರಲ್ಲಾ ಕಾರ್ತಿಕ್.ಚಾನ್ಸ್ ಸಿಕ್ಕಿದ್ರೆ ನಾನೂ ಖಂಡಿತ ಈ ಸಿನಿಮಾ ನೋಡುವೆ....

ಅನಾಮಧೇಯ ಹೇಳಿದರು...

ಹೊಸ ಹೆಜ್ಜೆ...
ಚೆನ್ನಾಗಿದೆ...

ಅನಾಮಧೇಯ ಹೇಳಿದರು...

ಕಾರ್ತಿಕ್ ಟೆಂಪ್ಲೆಟ್ ಚೆನ್ನಾಗಿದೆ..
ಕಾಂಚೀವರಂ ಚಿತ್ರ ಕುರಿತು ಬರಹವೂ..
-ಅಲೆಮಾರಿ.

ninada ಹೇಳಿದರು...

really gud presentation...

ninada ಹೇಳಿದರು...

really gud presentation...

shivu.k ಹೇಳಿದರು...

ಕಾರ್ತಿಕ್,

ನಿಮ್ಮ ಈ ಸಿನಿಮಾ ವಿಮರ್ಶೆ ತುಂಬಾ ವಸ್ತುನಿಷ್ಟವಾಗಿದೆ.....ನನಗೂ ಇದನ್ನು ನೋಡಬೇಕು ಅನ್ನಿಸಿದೆ....ಅಂದಹಾಗೆ ನಾನು ಲೈಪ್ ಇಸ್ ಬ್ಯುಟಿಪುಲ್ ಸಿನಿಮಾ ನೋಡಿದ್ದೇನೆ..ಅದೊಂದು ಅದ್ಬುತ ಸಿನಿಮಾ...

ಒಂದು ಒಳ್ಳೆಯ ಚಿತ್ರ ನೋಡಲು ಹೇಳಿದ್ದಕ್ಕೆ ಧನ್ಯವಾದಗಳು....

Admin ಹೇಳಿದರು...

Saw the movie yesterday,,,the movie is really bad..without a proper message n slow narration...but may win many many awards...coz its so called pakka "Buddijeevi cinema"...don know y these boring,senseless movies get lot of awards,calling themselves art films...:( or i think these movies r just made for the sake of getting awards:)

There is a movie called GURU in malayalam,just watch the movie to know what is called a real art film..U won't get bored even for a single sec. the movie starts n continues like any other normal commercial movie for half n hour,after that the movie takes u to a diff.world... u'll love it for sure...:)


but karthik nimma presentation chennaade..:)

ವನಿತಾ / Vanitha ಹೇಳಿದರು...

Here is the link to movie, if anybody is interested,

http://www.youtube.com/watch?v=XsJ0HDwGxYc&feature=related