ಶುಕ್ರವಾರ, ಜೂನ್ 27, 2008

ಒಂದು ವಿಚಿತ್ರ ಕಥೆ

(ಓ ಹೆನ್ರಿ ಕಥೆಗಳನ್ನು ಓದುವ ಸುಖವೇ ಬೇರೆ. ಆತನ ಪ್ರತೀ ಕಥೆಯ ಕೊನೆಗಿರುವ ತಿರುವು ಓದುಗನಲ್ಲೊಂದು ಮಿಂಚು ಹುಟ್ಟಿಸುತ್ತದೆ. "A Strange Story" ಅನ್ನುವ ಆತನ ಪುಟ್ಟ ಕಥೆಯನ್ನು ಓದಿ ಮುಗಿಸಿದಾಗ, ಅದನ್ನು ಹಾಗೆ ಸುಮ್ಮನೆ ಕನ್ನಡಕ್ಕೆ ಅನುವಾದಿಸೋಣ ಅನ್ನಿಸಿತು)

ಆಸ್ಟಿನ್ ಉತ್ತರ ಭಾಗದಲ್ಲಿ ಸ್ಮಾಥರ್ಸ್ ಕುಟುಂಬ ವಾಸಿಸುತ್ತಿತ್ತು. ಜಾನ್ ಸ್ಮಾಥರ್ಸ್, ಅವನ ಹೆಂಡತಿ, ಐದು ವರ್ಷದ ಪುಟ್ಟ ಮಗಳು ಇದು ಅವರ ಸುಖೀ ಕುಟುಂಬ.

ಒಂದು ರಾತ್ರಿ ಊಟಕ್ಕೆ ಕುಳಿತಿದ್ದಾಗ ಮಗಳಿಗೆ ಹೊಟ್ಟೆನೋವು ಕಾಣಿಸಿಕೊಂಡಿತು. ಜಾನ್ ಸ್ಮಾಥರ್ಸ್ ಔಷಧಿ ತರಲು ಪೇಟೆಗೆ ಹೋದ.

ಆತ ಹಿಂದಿರುಗಿ ಬರಲಿಲ್ಲ.

ಪುಟ್ಟ ಹುಡುಗಿ ಗುಣಮುಖಳಾದಳು. ಗಂಡನ ಕಣ್ಮರೆಯಿಂದ ಹೆಂಡತಿ ಬಹಳ ದುಃಖಿಸಿದಳು. ಕೊನೆಗೆ ಮರು ಮದುವೆಯಾಗಿ ಸ್ಯಾನ್ ಆಂಟೋನಿಯೋಗೆ ಪ್ರಯಾಣ ಬೆಳೆಸಿದಳು. ಆ ಪುಟ್ಟ ಹುಡುಗಿ ಬೆಳೆದು ನಿಂತಳು.

ಬೆಳೆದು ನಿಂತ ಪುಟ್ಟ ಹುಡುಗಿಗೆ ಸಹ ಮದುವೆಯಾಯಿತು. ಕೆಲವು ವರ್ಷ ಕಳೆಯಿತು. ಈಗವಳು ಐದು ವರ್ಷದ ಮಗಳ ತಾಯಿ. ತನ್ನ ತಂದೆ ಔಷಧಿ ತರಲು ಹೋಗಿ ತಿರುಗಿ ಬಾರದ ಆ ಮನೆಯಲ್ಲೇ ಅವಳೀಗ ವಾಸಿಸುತ್ತಿದ್ದಳು.

ಒಂದು ರಾತ್ರಿ ಅವಳ ಮಗಳು ಪ್ಯಾನ್ಸಿಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತು. ಜಾನ್ ಸ್ಮಾಥರ್ಸ್ ಕಾಣೆಯಾಗಿದ್ದ ದಿನವೇ ಇದೆಲ್ಲ ನಡೆದದ್ದು ಆಕಸ್ಮಿಕವೋ, ಪೂರ್ವವಿರ್ಧರಿತವೋ ಗೊತ್ತಿಲ್ಲ.

"ನಾನು ಪೇಟೆಗೆ ಹೋಗಿ ಮಗಳಿಗೆ ಔಷಧಿ ತರುತ್ತೇನೆ" ಎಂದ ಗಂಡ.

"ಪ್ಲೀಸ್ ಬೇಡ, ನೀನೂ ಕೂಡಾ ಹಿಂತಿರುಗಿ ಬರಲು ಮರೆತು ಹೋಗುತ್ತೀಯಾ ನನ್ನಪ್ಪನಂತೆ" ಆಕೆ ಕಣ್ಣೀರಿಟ್ಟಳು.

ಹೆಂಡತಿಯ ಗೋಳು ಕೇಳಲಾಗದೆ ಗಂಡ ಮನೆಯಲ್ಲೇ ಉಳಿದ. ಆದರೆ ಸ್ವಲ್ಪ ಸಮಯದಲ್ಲೇ ಪ್ಯಾನ್ಸಿಯ ಆರೋಗ್ಯ ಹದಗೆಡಲು ಶುರುವಾಯ್ತು. ಗಂಡ ಸ್ಮಿತ್ ಔಷಧಿ ತರಲು ಹೋಗುವುದಾಗಿ ಮತ್ತೆ ಎದ್ದ. ಆದರೆ ಆಕೆ ಬಿಡಲೇ ಇಲ್ಲ.

ಆಗ ಅಕಸ್ಮಾತ್ತಾಗಿ ಬಾಗಿಲು ತೆರೆದುಕೊಂಡಿತು. ಗೂನು ಬೆನ್ನಿನ, ಉದ್ದನೆಯ ಬಿಳಿ ಕೂದಲಿನ ಮುದುಕ ಕೋಣೆ ಪ್ರವೇಶಿಸಿದ. ಅವರು ಗುರುತಿಸುವ ಮೊದಲೇ ಪ್ಯಾನ್ಸಿ ಆತನನ್ನು ಗುರುತಿಸಿದಳು. "ಹೇ...ಅಜ್ಜ ಬಂದ್ರು" ಅಂತ ಖುಷಿ ಖುಷಿಯಾದಳು.

ಆ ಮುದುಕ ಕಿಸೆಯಿಂದ ಔಷಧಿಯ ಬಾಟ್ಲಿ ಹೊರತೆಗೆದ. ಪ್ಯಾನ್ಸಿಗೆ ಚಮಚ ಪೂರ್ತಿ ಕುಡಿಸಿದ. ಆಕೆ ಕೂಡಲೇ ಚೇತರಿಸಿಕೊಂಡಳು.

"ನಾನು ಬರೋದು ಸ್ವಲ್ಪ ತಡವಾಯ್ತು. ಸ್ಟ್ರೀಟ್ ಕಾರಿಗಾಗಿ ಕಾಯುತ್ತಿದ್ದೆ" ಎಂದು ನಿಟ್ಟುಸಿರು ಬಿಟ್ಟ ಜಾನ್ ಸ್ಮಾಥರ್ಸ್.

7 ಕಾಮೆಂಟ್‌ಗಳು:

Sushrutha Dodderi ಹೇಳಿದರು...

ಒಳ್ಳೇ ಕಥೆ. Perfect translation.

ಶ್ರೀನಿಧಿ.ಡಿ.ಎಸ್ ಹೇಳಿದರು...

super! nice translation. thanks!

ಮಹೇಶ್.ಪಿ ಹೇಳಿದರು...

superb...pls try like this some other story also

ವಿನಾಯಕ ಭಟ್ಟ ಹೇಳಿದರು...

ಈ ಕಥೆ ಎಲ್ಲೋ ಓದಿದ ಹಾಗಿದೆ. ಪುಸ್ತಕದಲ್ಲಿ ಪ್ರಕಟವಾಗಿದೆಯಾ? ಅಥವಾ ಅಂಕುರದಲ್ಲಿಯಾ? ಸರಿಯಾಗಿ ನೆನಪಾಗುತ್ತಿಲ್ಲ. ಅಂತೂ ಓದಿದ್ದೇನೆ...

ಕಾರ್ತಿಕ್ ಪರಾಡ್ಕರ್ ಹೇಳಿದರು...

ಅಂಕುರದಲ್ಲಿ ಪ್ರಕಟವಾಗಿಲ್ಲ. ಮೊನ್ನೆ ತಾನೇ o'ಹೆನ್ರಿಯ ಕಥೆಗಳ ಪುಸ್ತಕ ಓದುತ್ತಿದ್ದೆ. ಆಗ ಈ ಕಥೆ ಕಣ್ಣಿಗೆ ಬಿತ್ತು. ಹಾಗಾಗಿ ಅನುವಾದ ಮಾಡಿದೆ. ಈ ಮೊದಲೇ ಯಾರಾದರೂ ಅನುವಾದ ಮಾಡಿರಬಹುದು. ನನಗೆ ಆ ಕುರಿತು ಮಾಹಿತಿ ಇಲ್ಲ.

ಅನಾಮಧೇಯ ಹೇಳಿದರು...

Hi
This is Gauri.Good story & the translation was a gud attempt.

ಮನೋರಮಾ.ಬಿ.ಎನ್ ಹೇಳಿದರು...

chennagide.....
anuvadada anubhava olleyadallave..!