ಭಾನುವಾರ, ಮಾರ್ಚ್ 9, 2008

ಬೊಗಸೆ ಕಂಗಳಿಗೊಂದು ಬಿನ್ನಹ

ನನಗೆ
ಉತ್ತರಗಳು ಬೇಡ
ಪ್ರಶ್ನೆಗಳಲ್ಲೇ
ಬದುಕಿ ಗೊತ್ತಿದೆಪ್ರತೀ ಪ್ರಶ್ನೆಯು
ಇರಿದಾಗ
ಕುಟುಕಿದಾಗ
ನರಳಿ ಗೊತ್ತಿದೆಬೀದಿ ದೀಪದ
ಬೆಳಕಲ್ಲಿ
ಪ್ರಶ್ನೆಗಳಲ್ಲೇ
ಮನೆ ಕಟ್ಟಿ
ಅಭ್ಯಾಸವಾಗಿದೆಪ್ರತೀ ಮುಂಜಾನೆ
ನೆಲ ಸಾರಿಸಿ
ರಂಗವಲ್ಲಿ ಚುಕ್ಕಿ ಇಡುತ್ತಿ
ಎಂದು ಹಂಬಲಿಸಿ
ಮುಸ್ಸಂಜೆ ಹತ್ತಿರಾಗುತ್ತಿದೆ
ಮತ್ತೇಕೆ ಬೇಕು ಹೇಳು
ನಿನ್ನ ಉತ್ತರದ ಚಿ()ತೆ?ಪ್ರಶ್ನೆಗಳ
ಶೂನ್ಯದಲ್ಲಿ
ವೃಂದಾವನ ಕಟ್ಟಲು
ಗೊತ್ತಿರುವ ನನಗೆ
ನೀನಿಲ್ಲದೆ ಬದುಕಬಹುದು
ಆದರೆ ನಿನ್ನ ಪ್ರೀತಿ
ಹುಟ್ಟಿಸಿದ ಪ್ರಶ್ನೆ ಇಲ್ಲದೆ
ಬದುಕಲು ಗೊತ್ತಿಲ್ಲ!
(ಬೆಂಗಳೂರಿನಕ್ರೈಸ್ಟ್ ಕಾಲೇಜು ನಡೆಸಿದ 2007-08ನೇ ಸಾಲಿನ ಡಾ..ರಾ.ಬೇಂದ್ರೆ ಸ್ಮೃತಿ ಅಂತರ್ಕಾಲೇಜು ಕವನ ಸ್ಪರ್ಧೆಯಲ್ಲಿ ಬಹುಮಾನಿತ ಕವನ)

5 ಕಾಮೆಂಟ್‌ಗಳು:

VENU VINOD ಹೇಳಿದರು...

ಆದರೆ ನಿನ್ನ ಪ್ರೀತಿ
ಹುಟ್ಟಿಸಿದ ಪ್ರಶ್ನೆ ಇಲ್ಲದೆ
ಬದುಕಲು ಗೊತ್ತಿಲ್ಲ!

ಸುಪರ್ಬ್ ಸಾಲು...

ಮನೋರಮಾ.ಬಿ.ಎನ್ ಹೇಳಿದರು...

tumba chennaide nimma ella kavite....

ಗೌತಮ್ ಹೆಗಡೆ ಹೇಳಿದರು...

:)

ಅನಾಮಧೇಯ ಹೇಳಿದರು...

Nimma blog kevala kavithe odorigu,bareyorigu maathra meesala?
Chennagide..superb...annorige ee kavitheya hinde iro bhava goththilla..adu nanage mathra thilidide.....!So naanu idu chennagide annolla..annode illa..yavaththigoo annolla...annolla..annolla...!

Chetan Hosakote ಹೇಳಿದರು...

ಪ್ರಿಯ ಕಾರ್ತಿಕ್,

ಈ ನಿಮ್ಮ ಕವಿತೆ ನನ್ನ ಪರಿಸ್ಥಿಯನ್ನ ನೋಡಿಯೇ ಬರೆದಿರುವಂತಿದೆ...ನಾನೂ ಸಹ ಉತ್ತರವನ್ನು ಬಯಸದೆಯೇ ಬದುಕುತ್ತಿರುವೆ...ನಿಮ್ಮ ಒಪ್ಪಿಗೆ ಇದ್ದಲ್ಲಿ ನಿಮ್ಮ ಹೆಸರಿನ ಜೊತೆ ಈ ಕವಿತೆಯನ್ನು ನನ್ನ ಹಳೆಯ ಗೆಳತಿಗೆ ಹೇಳಬೇಕೆಂದಿದ್ದೇನೆ...ನೀವೇನಂತೀರ...ಒಪ್ಪಿಗೆ ಕೊಡುತ್ತೀರಾ..?

ಚೇತನ್ ಹೊಸಕೋಟೆ.