ಸಂತೆಯಲಿ ಬಿದ್ದ ಸ್ವಪ್ನದಂತೆ
ನೋವಿಗೆ ಅವಳದೇ ಪನ್ನೀರು
ಕಾಡಿಗೆ ಕರಗದೇ ಒಂಚೂರು
ಕುಂತ ಒಂದು ಘಳಿಗೇಲಿ
ನಡೆದ ಒಂದು ಹೆಜ್ಜೇಲಿ
ಒಂಟಿಯಾಗಿ ಒಲವು ಬೆಂದು ಬಾಡಿದೆ
ಎದೆಯಲಿ ಮುಗಿಯದ ನೋವಿಗೆ
ಕಣ್ಣಲಿ ಕಾಣದ ಹಸಿವಿದೆ
ಉಸಿರೆಲ್ಲೋ ಕಳೆದು
ಹೆಸರೆಲ್ಲೋ ಉಳಿದು
ಇರದೇ ಇದ್ದರೂ
ಕಣ್ಣಲಿ ಕಾಣಿಸೋ ಸತ್ಯಕೆ
ಬೇರೆ ಪ್ರೇಮ ಪತ್ರ ಬೇಕೇ
ಕಾಡುವಂಥ ಸ್ವಪ್ನ ಸಾಕೇ.....
1 ಕಾಮೆಂಟ್:
ಭಾವ ಜಾರಿ ಜಾರಿ,,, ಮನದೊಳಗೆ ಹರಿಯಿತು,,,, ಸುಂದರ
-ಜೀ ಕೇ ನವೀನ್
ಕಾಮೆಂಟ್ ಪೋಸ್ಟ್ ಮಾಡಿ