ಸೋಮವಾರ, ಡಿಸೆಂಬರ್ 7, 2009

ವಿರಹವೋ, ವಿಷಾದವೋ, ಬಿಡುಗಡೆಯ ಸಾಂತ್ವನವೋ - ಚಿಟ್ಟೆಯಂತೆ ಹಾರುತ್ತಿದೆಯಷ್ಟೇ

"ಚಿಟ್ಟೆ" ಗ್ರೀಟಿಂಗ್ ಕಾರ್ಡ್ಸ್ ಯಾರಿಗೆ ಗೊತ್ತಿಲ್ಲ ಹೇಳಿ.

ಹೂ ಭಾಷೆಯ, ಮುದ ನೀಡುವ, ಸೆಳೆಯುವ ಸಾಲುಗಳ ಅಕ್ಷರ ಮಾಲೆ "ಚಿಟ್ಟೆ" ಕನ್ನಡ ಶುಭಾಶಯ ಪತ್ರಗಳು. ಅದಕ್ಕಾಗಿ ನಾನು ಬರೆದ ಪುಟ್ಟ ಬರಹದ ಗುಚ್ಚ, ಆಕರ್ಷಕವಾಗಿ ವಿನ್ಯಾಸಗೊಂಡು ಮಾರುಕಟ್ಟೆಯಲ್ಲಿದೆ. ಆ ಬರಹವನ್ನು ಇಲ್ಲಿ ಹಾಕುತ್ತಿದ್ದೇನೆ. ಇದು ವಿರಹವೋ, ವಿಷಾದವೋ, ಬಿಡುಗಡೆಯ ಸಾಂತ್ವನವೋ --ಒಬ್ಬೊಬ್ಬರಿಗೆ ಒಂದೊಂದು ತರಹ..!!!

ನೀ ಬಿಟ್ಟು ಹೋದ ಆ ರಾತ್ರಿ
ಗಿಜಿಗುಡುವ ಫುಟ್ಪಾತು

ಖಾಲಿ, ಖಾಲಿ

ನಡೆದಷ್ಟು ಮುಗಿಯದ

ನೋವು
ಮಂಜು ಮಂಜು ಕಣ್ಣುಗಳು

ಭಾವನೆಗಳೆಲ್ಲಾ

ಮೋಡವಾಗಿತ್ತೇನೋ
ಜಡಿ ಮಳೆ

ಅದರಲ್ಲಿ ತೋಯ್ದರೂ
ನನ್ನೊಳಗಿನ ನಿನ್ನ ಚಿತ್ರ ಒದ್ದೆಯಾಗಲಿಲ್ಲ
ಮಾಸಲಿಲ್ಲ

ಮರೆಯಲು ಯತ್ನಿಸಿದಷ್ಟು
ಕರ್ಪೂರದ ಹಾಗೆ
ನನ್ನೊಳಗೆ ಸುಡುತ್ತಿದ್ದೀಯಾ

ನನ್ನೊಳಗಿನ ಗುಬ್ಬಚ್ಚಿ ನೋವು
ಹಾಗೆಯೇ ಇರಲಿ
ಅದನ್ನೂ ಕಿತ್ತುಕೊಳ್ಳಬೇಡ ಪ್ಲೀಸ್

ನನಗದು ಬದುಕಲು ಕಲಿಸಿದೆ

5 ಕಾಮೆಂಟ್‌ಗಳು:

ಬಾಲು ಹೇಳಿದರು...

super ide. akarshaka saalugalu.

santosh naik ಹೇಳಿದರು...

enta adbuta salugalu .alvas nalli nodidde aa saalu galu niimmadendu tilidu kushiyayitu

VENU VINOD ಹೇಳಿದರು...

soooooper kaaarthik...nice lines

Unknown ಹೇಳಿದರು...

’ಚಿಟ್ಟೆ’ ವಿನ್ಯಾಸಕ್ಕೆ ಇನ್ನಷ್ಟು ಅರ್ಥ ನೀಡುವ ಸಾಲುಗಳು 'ನನ್ನೊಳಗಿನ ನಿನ್ನ ಚಿತ್ರ ಒದ್ದೆಯಾಗಲಿಲ್ಲ
ಮಾಸಲಿಲ್ಲ..'ವಾಹ್ ಚೆನ್ನಾಗಿದೆ ಕಾರ್ತಿಕ್

Unknown ಹೇಳಿದರು...

Apthavenisuttave..