ಗುರುವಾರ, ಸೆಪ್ಟೆಂಬರ್ 10, 2009

ದ.ರಾ. ಬೇಂದ್ರೆ ಕವನ ವಾಚಿಸುತ್ತಾರೆ ಕೇಳಿ

.ರಾ.ಬೇಂದ್ರೆ ಕುರಿತು ಗಿರೀಶ್ ಕಾರ್ನಾಡ್ ನಿರ್ಮಿಸಿದ ಸಾಕ್ಷ್ಯಚಿತ್ರ ಇವತ್ತಿಗೂ ನೆನಪಾದಾಗ ಪುಳಕವಾಗುತ್ತದೆ..

ಸಾಕ್ಷ್ಯಚಿತ್ರವೊಂದನ್ನು ಅದೆಷ್ಟು ಆತ್ಮೀಯವಾಗಿ ತೆರೆಯ ಮೇಲೆ ತೆರೆದಿಡಬಹುದು ಎನ್ನುವುದನ್ನು ತೋರಿಸಿಕೊಡುತ್ತದೆ ಅವರ
ಪ್ರಯತ್ನ. ಕಪ್ಪು-ಬಿಳುಪಿನ ಬಣ್ಣಗಳಲ್ಲಿ ಕವಿಯ ಅತೀ ಚಿಕ್ಕ ವಿವರವನ್ನೂ ಕೂಡಾ ಅವರು ದಾಖಲಿಸುತ್ತಾರೆ (ಉದಾ:.ರಾ. ಬೇಂದ್ರೆ ಯಾವಾಗಲೂ ತಮ್ಮ ಕೋಣೆಯಲ್ಲಿ ಪುಸ್ತಕಗಳನ್ನು ಹರಡಿಕೊಂಡಿರುತ್ತಿದ್ದದ್ದು).

ಧಾರವಾಡದ
ಹಾದಿಗಳಲ್ಲಿ ಬೇಂದ್ರೆ ಸಾಗುತ್ತಿದ್ದರೆ
ನೋಡುಗನಿಗೆ ರೋಮಾಂಚನ. ವರ ನಡಿಗೆ, ಕೊಡೆ, ಮಳೆ, ಹಣ್ಣು ಮಾರುವವರ ಜೊತೆ ಒಡನಾಡುವ ರೀತಿ ಎಲ್ಲವನ್ನು ಯಾವುದೇ ಕ್ರತ್ರಿಮತೆ ಇಲ್ಲದೆ ಗಿರೀಶ್ ಕಾರ್ನಾಡ್ ದ್ರಶ್ಯದಲ್ಲಿ ದಾಖಲು ಮಾಡುತ್ತಾರೆ. ಸಾಕ್ಶ್ಯಚಿತ್ರದಲ್ಲಿರುವ ಕೆಲವೊಂದು ಶಾಟ್ ಗಳು ವಾರೆವ್ವಾ ಎನ್ನುವಂತಿವೆ. ಸಾಕ್ಶ್ಯಚಿತ್ರಗಳ ನಿರ್ಮಾಣದ ಬಗ್ಗೆ ಆಸಕ್ತಿ ಇರುವವರು ಇದನ್ನು ತಪ್ಪದೇ ನೋಡಬೇಕು..



ಇದೆಲ್ಲಕ್ಕಿಂತ ಹೆಚ್ಚಾಗಿ ಸಾಕ್ಷ್ಯಚಿತ್ರದಲ್ಲಿ ನಮ್ಮೆಲ್ಲರನ್ನು ಪುಳಕಿತರನ್ನಾಗಿ ಮಾಡುವ ಅಂಶವೊಂದಿದೆ. ಸ್ವತಃ .ರಾ. ಬೇಂದ್ರೆ ಇಲ್ಲಿ ತಮ್ಮ " ವಿಶ್ವಮಾತೆಯ ಗರ್ಭ ಕಮಲಜಾತ..." ಕವನವನ್ನು ವಾಚನ ಮಾಡಿದ್ದಾರೆ.

ಈಗಂತೂ ಕವನ ವಾಚನವೇ ಅಪರೂಪ. ಇಂತಹ ಸಂದರ್ಭದಲ್ಲಿ ಬೇಂದ್ರೆಯಂತಹ ಕವಿಯ ಸಾಲುಗಳನ್ನು ಅವರ ಬಾಯಲ್ಲಿ ಕೇಳಿ
ಪಡೆದುಕೊಳ್ಳುವ ಸುಖಕ್ಕೆ ಸಾಟಿ ಯಾವುದಿದೆ ನೀವೇ ಹೇಳಿ.

ಕವನ ವಾಚನದ ದ್ರಶ್ಯ ತುಣುಕು ನಿಮಗಾಗಿ....(ಕೆಳಗಿನ ಕೊಂಡಿ ಕ್ಲಿಕ್ ಮಾಡಿ)

// ವಿಶ್ವಮಾತೆಯ
ಗರ್ಭ ಕಮಲಜಾತ ಪರಾಗ ಪರಮಾಣು ಕೀರ್ತಿ ನಾನು //



ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು |
ಭೂಮಿತಾಯಿಯ ಮೈಯ ಹಿಡಿಮಣ್ಣು ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು !


ಭರತಮಾತೆಯ ಕೋಟಿ ಕಾರ್ತಿಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ ನಾನು !
ಕನ್ನಡದ ತಾಯಿ ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು !

ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು !
ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು !

ಹೃದಯಾರವಿಂದದಲ್ಲಿರುವ ನಾರಾಯಣನೆ
ತಾನಾಗಿ ದತ್ತ ನರನು !
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು !

http://www.darabendre.org/ ನಲ್ಲಿ ಸಿಕ್ಕ ದ್ರಶ್ಯ ತುಣುಕಿದು.

5 ಕಾಮೆಂಟ್‌ಗಳು:

ಗೌತಮ್ ಹೆಗಡೆ ಹೇಳಿದರು...

hello boss. naanu nimmante film bagge huchchu iruvava.neevu sikkiddu nange khushi aaytu bloginalli. harishemaani@gmail.com idu nanna e mail address.nimma kelavu baraha oadide. film bagge nimma huchchu arthavaaytu.dayavittu omme nanna gmail ge message haaki.heluvudu kelavashtu ide.

shivu.k ಹೇಳಿದರು...

ಕಾರ್ತಿಕ್,

ಬೇಂದ್ರೆಯವರ ಕವನವಾಚನದ ವಿಡಿಯೋ ನೋಡಿ ಧನ್ಯನಾದೆ...

ಏಕಾಂತ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಏಕಾಂತ ಹೇಳಿದರು...

ಹಾಯ್ ಕಾರ್ತಿಕ್...Nice to see your Blog
ಕ್ಲಾಸಿಕ್ ಸಿನೆಮಾಗಳ ಗೀಳು ಹತ್ತಿಕೊಂಡ ಮೇಲೆ ನೋಡಬೇಕಾದವುಗಳ ದೊಡ್ಡ ಪಟ್ಟಿ ಮಾಡಿಟ್ಟಿದ್ದೆ. ಅವಲ್ಲಿ ಕೆಲವನ್ನು ಬ್ಲಾಗ್‍ನಲ್ಲಿ ಪರಿಚಯಿಸಿದ್ದು ಖುಷಿಯಾಯ್ತು. ಶುಭವಾಗಲಿ. ಮತ್ತಷ್ಟು ಬರಹಗಳ ನಿರೀಕ್ಷೆಯಲ್ಲಿ...ಲಕ್ಷ್ಮಿಕಾಂತ್

ASHRAF ಹೇಳಿದರು...

ಬ್ಲಾಗ್ ತುಂಬಾ ಚೆನ್ನಾಗಿದೆ