ಆಚೀಚೆ ಓಡಾಡುತ್ತಿದ್ದಾಗ ನನಗೆ ಓದಲು ಸಿಕ್ಕ ಅಪೂರ್ವ ಸಾಲುಗಳು..!
1. ತುಮಕೂರು ಜಿಲ್ಲೆಯ ಹೊಳವನಹಳ್ಳಿಯಲ್ಲಿ ಸಿಕ್ಕ ಫೋಟೋ ಇದು.
ಮಠ ಸಹ ಖಾಸಗಿ ಸ್ವತ್ತು ಅಂತ ಘಂಟಾಘೋಷವಾಗಿ ಪ್ರಕಟಿಸಿದ್ದು ಬಹುಷಃ ಇದೇ ಮೊದಲಿರಬೇಕು. ರಿಯಲ್ ಎಸ್ಟೇಟ್ ಸಿಟಿ ಬೆಂಗಳೂರಿಗೆ ತುಮಕೂರು ಹತ್ತಿರವಿರುವುದರಿಂದ ಅತಿಕ್ರಮ ಪ್ರವೇಶದ ಭಯ ಮಠದ ಮಾಲೀಕನನ್ನು ಕಾಡಿರಬೇಕು! ಅಥವಾ ಮಠಕ್ಕೆ ಹಿಂದಿನ ಬಾಗಿಲಿನಿಂದ ಪ್ರವೇಶವಿಲ್ಲ ಎನ್ನುವುದು ಈ ಬೋರ್ಡಿನ ಉದ್ದೇಶವಿರಬಹುದೇನೋ!!
2. ತ್ಯಾಗರಾಜ ನಗರದ ಹೋಟೆಲೊಂದರ ಹೆಸರು:
ಕೋಳಿ ಮನೆ -ವೆಜ್ ಅಂಡ್ ನಾನ್ ವೆಜ್
ವೆಜ್ ಕೋಳಿ ಸಹ ಸಿಗುತ್ತೆ ಅಂತ ಗೊತ್ತಾಗಿದ್ದು ಬೆಂಗಳೂರಿಗೆ ಬಂದ ಮೇಲೇನೇ!!
3.ಕಾವೇರಿ ಭವನದ ಪಕ್ಕದ ಕಂಪೌಂಡುಗಳಲ್ಲಿದ್ದ ಕರವೇಯ ವಿಶ್ವ ಕನ್ನಡಿಗರ ಸಮಾವೇಶದ ಗೋಡೆ ಬರಹ:
ಕನ್ನಡ ನಾಡನ್ನು, ಚಿನ್ನದ ಬೀಡನ್ನು ಕಟ್ಟೇ ಕಟ್ಟುತ್ತೇವೆ.
ಹಾಗಾದರೆ ಈಗಿರುವ ಕನ್ನಡ ನಾಡು ಗುಂಪಿಗೆ ಸೇರದ ಪದವೇ?
4. ತುಮಕೂರಿನ ಊರ್ಡಿಗೆರೆಯಲ್ಲಿ ಹಾದು ಹೋಗುತ್ತಿದ್ದಾಗ ಕಾಣಿಸಿದ್ದು:
ನಾಗೇಶ್ ಮಾಂಸಾಹಾರಿ ಹಿಂದೂ ಮಿಲಿಟ್ರಿ ಹೋಟೆಲ್
ಹೋಟೆಲ್ ಬೋರ್ಡಿನಲ್ಲೂ ಇದೆ ನೋಡಿ ಧರ್ಮದ ಡಿವೈಡರು!
7 ಕಾಮೆಂಟ್‌ಗಳು:
Hi Karthik,
SOOOOOOOOOOOOper.
thumba olle vishaya idu.
`ಇಲ್ಲಿ ಯಾರು ಮೂತ್ರ ಮಾಡಬಾರದು' ಎಂಬ ಬೋರ್ಡ್ ನನಗೆ ಆಗಾಗ ಕಾಣಿಸುತ್ತಿರುತ್ತದೆ. `ಯಾರು' ಮೂತ್ರ ಮಾಡಬಾರದು ಎಂದು ರಾಷ್ಟ್ರೀಯ ವಿಚಾರ ಸಂಕಿರಣ ಮಾಡಲಿಕ್ಕೆ ಆಗುತ್ತದಾ, ಕಾರ್ತಿಕ್. ಅದು `ಯಾರೂ' ಅಂತ ಆಗದೇ ಹೋದರೆ ಎಂಥ ಅಪಾರ್ಥ ಅಲ್ವಾ?
-ವಿಕಾಸ ನೇಗಿಲೋಣಿ
I like your blog
http://chitra-vichitra.blogspot.com
ಗೆ ಒಮ್ಮೆ ಭೇಟಿ ಕೊಡಿ.
cool...
i think wherever u go u will find one or the other things of this sort... that too, especially you...
good karthik...
good luck
ನನಗೂ ಕೂಡ ಇ೦ತಹ 'ಒಳ್ಳೆಯ' ಅಭ್ಯಾಸ ಉ೦ಟು.
ನಮ್ಮ ಊರಿನಲ್ಲಿ ಒ೦ದು ಜೆಸಿಬಿ/ಬುಲ್ಡೋಜರ್ ಅ೦ಗಡಿ ಇದೆ..
ಅ೦ಗಡಿ ಹೆಸರು .."ಸಾಕ್ಷಾತ್ ಅರ್ಥ್ ಮೂವರ್ಸ್" :D
hahahaha.....
avara moorkha asahaayakate..,nimma avakasha...superb
once I asked a hotel fellow about board, he told: Hindu nonveg hotel means there no beaf. I could not ask anything again.
ಕಾಮೆಂಟ್ ಪೋಸ್ಟ್ ಮಾಡಿ