ಊರಿಂದ ಪೇಟೆಗೆ ಹೊರಟಿದ್ದೆ.
ನನ್ನ ಸೀಟ್ ನಂಬರು:ಎ4, ಸ್ಲೀಪರ್ ಸೀಟು.
ಮೂಡುಬಿದಿರೆಯ ಏಕಾಂಗಿತನ, ಉಜಿರೆ ಪಕ್ಕದ ಕುಡುಮೌನಿ ಗಡಾಯಿಕಲ್ಲು, ಧರ್ಮಸ್ಥಳದ ದೀಪದ ಬೆಳಕು ದಾಟಿದಾಗ ಹತ್ತಿರ ಹತ್ತಿರ ಹನ್ನೆರಡು.
ಉಳುಕುತ್ತಾ,ಬಳುಕುತ್ತಾ ಬಸ್ಸು ಶಿರಾಡಿ ಘಾಟಿ ಏರುತ್ತಿದ್ದದ್ದು, ಬಲ ಬದಿಯಲ್ಲಿ ಜನರೇಟರಿನ ಬೆಳಕಲ್ಲಿ ರಾತ್ರಿ ಪಾಳಿಯ ಹೆಂಗಸರು, ಗಂಡಸರು ಗುಂಡ್ಯದ ಹೊಳೆಯ ಅಣೆಕಟ್ಟಿಗೆ ಕಾಂಕ್ರೀಟು ಹೊರುತ್ತಿದ್ದುದು ನೋಡಿದೆ. ನೋಡಿ ಆನಂದಿಸುವುದೋ, ದುಃಖಿಸುವುದೋ ಎಂದು ತಿಳಿಯುವ ಮೊದಲೇ ಮಂಪರು ನಿದ್ದೆ.
ಎದ್ದಾಗ ಬಸ್ಸು ಎಲ್ಲೋ ನಿಂತಿತ್ತು.
ಆಗ ಗಂಟೆ ಎರಡು. ಬಸ್ಸಿನಲ್ಲಿದ್ದವರಲ್ಲಿ ಬಹಳಷ್ಟು ಮಂದಿ ಹೊರಗೆ ಹೋಗಿದ್ದರು. ಉಳಿದವರು ಕೂತಲ್ಲಿ, ಕೆಲವರು ಮಲಗಿದಲ್ಲಿ ಚೆಲ್ಲಾಪಿಲ್ಲಿಯಾಗಿದ್ದರು.
ಅಷ್ಟು ಹೊತ್ತು ಬಲವಂತದಿಂದ ಕಟ್ಟಿಕೊಂಡಿದ್ದ ಉಚ್ಚೆಯನ್ನು ಹೊರಹಾಕಲು ಓಡಿದೆ. ಕೊರೆಯುವ ಚಳಿ. ಒಂದೈದು ನಿಮಿಷ ಒದ್ದಾಡಿದೆ.
ಒಂದರ ಪಕ್ಕ ಒಂದು. ಮಹಾನಗರದ ಕಡೆ ಹೊರಟ ಬಸ್ಸುಗಳು. ಕೆಲವರು ಹೊರಗಡೆ ಕಾಫಿ ಹೀರುತ್ತಿದ್ದರು. ಚಳಿಯಲ್ಲಿ ನಡುಗುತ್ತಿದ್ದರು. ಹೋಟೇಲಿನ ಸಿಡಿ ಪ್ಲೇಯರ್ "ಏನೋ ಒಂಥರಾ" ಎಂದು ಅರಚುತ್ತಿತ್ತು.
ಸ್ವಲ್ಪ ಹೊತ್ತಲ್ಲೇ
ಒಂದೊಂದೇ ಹೆಡ್ ಲೈಟುಗಳು ಬೆಳಗಿದವು.
ಬಸ್ಸಿನ ಡ್ರೈವರುಗಳು ಅಕ್ಸಿಲೇಟರಿನ ಮೇಲೆ ಕಾಲು ಅದುಮಲು ಶುರುಮಾಡಿದರು. ಸ್ಟೇರಿಂಗಿನ ಆಣತಿಯಂತೆ ಚಕ್ರಗಳು ತಿರುಗಿದವು ವೇಗವಾಗಿ, ಆಚೆ-ಈಚೆ.
ನನ್ನದು ಯಾವ ಬಸ್ ನಂಬರು?
C1, M,Y,Z,1,2,3.......??????????
ಆ ಕ್ಷಣಕ್ಕೆ ಹೊಳೆಯಲಿಲ್ಲ.
ಅಕ್ಸಿಲೇಟರಿನ ವೇಗಕ್ಕೆ ಬಸ್ಸಿನ ಟಯರುಗಳು ಸ್ಪೀಡಾಗಿ ನನ್ನಿಂದ ದೂರ ಓಡಲು ಶುರು ಮಾಡಿದವು.
ವೇಗವಾಗಿ ಮತ್ತೂ ವೇಗವಾಗಿ.
6 ಕಾಮೆಂಟ್ಗಳು:
the concept is nice. still, it seems to me that, the narrator here is trying to escape the reality. whatever it can be understood in many ways, as you always mention.
chennagide...endina manodharmakke hosa touch...nice....
ondashtu helade uliyvude katheya lakshana enisuttade alwe? bhavaitri pratibhege olle kelasa...
I read all da. really nice. naanu blog madbeku anistide kano
ಯಾಕೋ ಗೊತ್ತಿಲ್ಲ, ಇಂಥದ್ದೇ ಅನುಭವ ನನಗೆ ಯಾವಾಗಲೂ ಆಗುತ್ತದೆ. ಮಧ್ಯೆರಾತ್ರಿ ಬಸ್ಸು ಇಳಿಯುವುದು ನನ್ನ ಮಟ್ಟಿಗೆ ಯಾವತ್ತೂ ನಿರಾಳ ವಿಷಯ ಅಲ್ಲವೇ ಅಲ್ಲ. ಕ್ಷಣ ಕ್ಷಣಕ್ಕೂ ನಾನು ಆತಂಕಗೊಳ್ಳುತ್ತೇನೆ, ಬಸ್ ನಂಬರ್ ಯಾವುದು ಎಂದು ನೆನಪಾಗುವುದಿಲ್ಲ. ಬಸ್ನ ಕಲರ್ ಕನ್ಫ್ಯೂಸ್ ಆಗಲು ಶುರುವಾಗುತ್ತದೆ.
ಹಾಗಾಗಿ ರಾತ್ರಿ ಹಸಿವಾಗುತ್ತಿದ್ದರೂ ಯಾವತ್ತೂ ಎಲ್ಲೂ ಹೊಟೇಲ್ ಹೊಗ್ಗಲು ಇಷ್ಟಪಡುವುದಿಲ್ಲ. ಹಸಿವಿನ ಜೊತೆ ನಿರಾಳ ಮನಸ್ಸಿನಿಂದ ಬಸ್ ಹತ್ತಿ ಕುಳಿತುಕೊಳ್ಳುತ್ತೇನೆ.
ದೇವರೇ, ಬಸ್ ಯಾವ ರಾತ್ರಿಯೂ ಯಾರನ್ನೂ ಬಿಟ್ಟು ಹಾಗೆ ಸಾಗಿ ಹೋಗದಿರಲಿ, ಎಲ್ಲರೂ ಹಗಲು ಸೇಫ್ ಆಗಿ ಮನೆ ತಲುಪಲಿ.
-ವಿಕಾಸ್ ನೇಗಿಲೋಣಿ
ನನ್ನದು ಯಾವ ಬಸ್ ನಂಬರು?
C1, M,Y,Z,1,2,3.......??????????
ಆ ಕ್ಷಣಕ್ಕೆ ಹೊಳೆಯಲಿಲ್ಲ.
...................................
Tumba channagi nemma baravanige nodi kushi aithu..........
ennu ennu olleyadu bareiri.....
yendu harisutene............
Tamma viswasi,
can u leave ur phone number to me???
ಕಾಮೆಂಟ್ ಪೋಸ್ಟ್ ಮಾಡಿ