"Sorry
ನನಗೆ
ನಗಲು
ಪರ್ಮಿಶನ್ ಕೊಟ್ಟಿಲ್ಲ"
ಅಶ್ಚರ್ಯವಾಯ್ತು. ಇದಂತೂ ಒಳ್ಳೇ ಬ್ರೇಕಿಂಗ್ ನ್ಯೂಸ್ ಆಗಲಿಕ್ಕೆ ಫಿಟ್ ಅನ್ನಿಸಿತು. ಒಂದೆರಡು ಬೈಟ್ ತಗೊಂಡ್ರಾಯ್ತು. ಇವತ್ತಿನ ಅರ್ಧ ಗಂಟೆ ಪ್ರೋಗ್ರಾಂ ಡಮಾರ್. ಈ ವಾರದ ಟಿಆರ್ಪಿ ಏರಲಿಕ್ಕೆ ಇಷ್ಟು ಸಾಕು. ಚೀಫ್ ಕೂಡಾ ದಿಲ್ ಖುಷ್.
ಆದರೆ ನನಗೆ ಒಗಟು ಅನ್ನಿಸಿದ್ದು ಆತನ ಮಾತು.
ಒಳ್ಳೆ ಬಂಗಲೆ ಇದೆ. ಓಡಾಡಲಿಕ್ಕೆ ಸ್ಕೋಡಾ. ಅಷ್ಟು ದೊಡ್ಡ ಹುದ್ದೆ ಬೇರೆ. ಆರ್ಡರು ಮಾಡುವುದಷ್ಟೇ ಕೆಲಸ. ಈತನಿಗೆ ನಗಲು ಯಾರ ಪರ್ಮಿಶನ್ ಬೇಕು. ಇದಂತೂ ಹಾಸ್ಯಾಸ್ಪದ. ಅಥವಾ ಆತನಿಗೆ ಪತ್ರಕರ್ತನಾದ ನನ್ನನ್ನು ರೇಗಿಸಿ ಖುಷಿಪಡಬೇಕು ಅಂತ ಅನ್ನಿಸುತ್ತಿದೆಯಾ? ಆದರೆ ಅದು ನನ್ನ ಅನುಮಾನ ಮಾತ್ರ. ಆತ ಸಂದರ್ಶನದುದ್ದಕ್ಕೂ ಹಾಗೆ ತೋರ್ಪಡಿಸಿಕೊಳ್ಳಲಿಲ್ಲ. ಆತನ ಎದೆಯಾಳದಲ್ಲೇನೋ ಭಯಂಕರ ನೋವಿನ ಸಂತೆ ಇದ್ದಂತೆ ನನಗನಿಸಿತು.
ಆತ ವಿವರಿಸುತ್ತಾ ಹೋದ.
ಯಾಕೆ ನಗಲು ಸಾಧ್ಯವಾಗುತ್ತಿಲ್ಲ. ನಕ್ಕರೆ ಏನು ಪ್ರಾಬ್ಲಂ. ಎಲ್ಲವನ್ನು ಹೇಳುತ್ತಲೇ ಇದ್ದ. ಆತನನ್ನು ಕೇಳುತ್ತಾ ಹೋದಂತೆಲ್ಲಾ ಇದೇ ಕತೆ ಎಲ್ಲೋ ಕೇಳಿದ ಹಾಗಿದೆಯಲ್ಲ ಅನ್ನುವ ಅನುಮಾನ ಶುರುವಾಯಿತು. ಪಾತ್ರಗಳು, ಸನ್ನಿವೇಶಗಳು ಸ್ವಲ್ಪ ಆಚೆ-ಈಚೆ. ಆದರೆ ಇಡೀ ಕತೆಯ ಹೂರಣ ಒಂದೇ. ಯಾರ ಕತೆ ಇದು.
"ಈ ಕತೆಯನ್ನೆಲ್ಲೋ ಕೇಳಿದ ಹಾಗಿದೆಯಲ್ಲ. ಸೇಮ್ ಟು ಸೇಮ್ ನಿಮ್ಮದೇ ಸಮಸ್ಯೆ ಆತನಿಗೆ ಕೂಡಾ" ಅಂತ ಆತನ ಎದುರು ಬಾಯ್ಬಿಟ್ಟು ಹೇಳಲು ಆಗಲಿಲ್ಲ. "ಅರ್ಜೆಂಟ್ ಪ್ರೋಗ್ರಾಂ ಕವರ್ ಮಾಡ್ಬೇಕು. ಮತ್ತೆ ಫೋನ್ ಮಾಡ್ತೀನಿ" ಹಾಗಂತ ಹೇಳಿ ಹೊರಬಿದ್ದೆ.
ಡೈರಿ ಸರ್ಕಲ್ಲಿನ ಟ್ರಾಫಿಕ್ಕಿನಿಂದ ಹೊರಬಂದಾಗ ಸುಸ್ತೋ ಸುಸ್ತು.
ಆಗಲು ಕಾಡುತ್ತಿದ್ದದ್ದು ಆತ ಹೇಳಿದ ಆತನದ್ದೇ ಕತೆ.
ಅದರ ಪ್ರತಿ ಭಾವನೆ, ಸಮಸ್ಯೆ, ಸನ್ನಿವೇಶ ಎಲ್ಲೋ ನನಗೆ ಪರಿಚಿತ ಅನ್ನಿಸಿತು. ಬಹುಷಃ ನನ್ನ ಪರಿಚಯದವನದ್ದೇ ಸಮಸ್ಯೆ ಇದು. ಅವನಿಗೂ ನಗಲು ಆಗುತ್ತಿರಲಿಲ್ಲ. ಯಾರದು.....?
ಛೆ...ಸದ್ಯಕ್ಕೆ ನೆನಪಾಗುತ್ತಿಲ್ಲ.
ಅದಾದ ನಂತರದ ಘಳಿಗೆಗೆ ನಗಲು ಪ್ರಯತ್ನಿಸಿದೆ.
ಸಾಧ್ಯವಾಗಲಿಲ್ಲ !
5 ಕಾಮೆಂಟ್ಗಳು:
ಇದಕ್ಕೊಂದು ಪುಟಾಣಿ ಕಮೆಂಟು :)
ಸೂಪರ್
ಕಾರ್ತಿಕ್ ನಿಮ್ಮ ಸಂವೇದನೆಗೆ ಧನ್ಯವಾದ
@ ವೇಣು ವಿನೋದ್,
ನನ್ನ ಬರಹಗಳಿಗೆಲ್ಲ ಪ್ರತಿಕ್ರಿಯಿಸುತ್ತಿದ್ದೀರ.. ಧನ್ಯವಾದ..
@ ಶ್ರೀದೇವಿ,
ನಗರ ಆಕರ್ಷಕವಾದಷ್ಟೇ,ನಿಗೂಢ.
hai karthik,
kathe chennagide. idara 'kattuvike'ye chennagide. keep it up.
-vikas negiloni
@ವಿಕಾಸ್..
ಧನ್ಯವಾದ ಕಣೋ
ಕಾಮೆಂಟ್ ಪೋಸ್ಟ್ ಮಾಡಿ