ಶನಿವಾರ, ಸೆಪ್ಟೆಂಬರ್ 27, 2008

ದೇವರು ಬದುಕುತ್ತಾ ಸಾಯುತ್ತಾ...(ಪುಟಾಣಿ ಕತೆ-7)

ದೇವರು ಸತ್ತು ಹೋದರು ಅಂತ ಸುದ್ದಿ ಸಿಕ್ಕಿತು.

ಸಾಲಿಗ್ರಮಕ್ಕೆ ಹಾಲು ಎರೆದು ಸ್ವಚ್ಚಗೊಳಿಸುತ್ತಿದ್ದವ ಮಡಿ ಪಂಚೆಯಲ್ಲಿ ಓಡಿ ಹೋದೆ. ಅದಾಗಲೇ 24*7 ಚಾನೆಲ್ಗಳೆಲ್ಲಾ ಬ್ರೇಕಿಂಗ್ ನ್ಯೂಸ್ನಲ್ಲಿ ಈ ಸುದ್ದಿಯನ್ನು ಚ್ಯೂಯಿಂಗಮ್ಮಿನಂತೆ ಎಳೆಯಲು ಶುರು ಮಾಡಿದ್ದರು.

ದೇವರು ಇಷ್ಟು ಬೇಗ ಸಾಯಲು ಕಾರಣವೇನು?
ಮೊದಲ ನೋಟಕ್ಕೆ ಹಾರ್ಟ್ ಅಟ್ಯಾಕ್ ತರಹ ಕಾಣುತ್ತೆ. ಆದರೆ ಹೃದಯ ನಿಂತು ಹೋಗುವ ವಯಸ್ಸಾ ದೇವರದ್ದು.
ದೇವ್ರೂ ಕೂಡಾ ಸಾಯ್ತಾರೆ ಅಂದ್ರೆ ಅಶ್ಚರ್ಯ.

ಆದರೆ ಪೋಲೀಸ್ ಇಲಾಖೆ ಈ ಘಟನೆಯನ್ನು ಆತ್ಮಹತ್ಯೆಯೋ, ಕೊಲೆಯೋ, ಸಹಜ ಸಾವೋ ಎಂಬುದನ್ನು ಇನ್ನೂ ದೃಢಪಡಿಸಿಲ್ಲ.

ಎಲ್ಲರೂ ಓಡೋಡಿ ಬಂದರು. ಸತ್ತ ದೇವರನ್ನು ನೋಡಲು.
ಹೆಣವನ್ನು ಕಂಡಾಗ ಎಲ್ಲರಿಗೂ ಒಮ್ಮೆ ಅವರವರ ದೇವರ ಮುಖ ಕಂಡಿತು. ಮತ್ತೊಮ್ಮೆ ಹೆಣ ತಮ್ಮ ದೇವರನ್ನು ಹೋಲುತ್ತಿಲ್ಲವಲ್ಲ ಅಂತ ಅನ್ನಿಸಲು ಶುರುವಾಯ್ತು
.
ಇವರೆಲ್ಲರ ಮಧ್ಯೆ ದೇವರು ಬದುಕುತ್ತಾ ಸಾಯುತ್ತಾ, ಸಾಯುತ್ತಾ ಬದುಕುತ್ತಾ.....

ದೇವರ ಹೆಣ ಕೊಳೆಯಲು ಆರಂಭವಾಯ್ತು.

14 ಕಾಮೆಂಟ್‌ಗಳು:

Shree ಹೇಳಿದರು...

ಒಪ್ಪವಾದ ಕಥೆ.

Harisha - ಹರೀಶ ಹೇಳಿದರು...

ಏನ್ರೀ ನೀವು.. ಅನಂತ ಎನಿಸಿಕೊಂಡಿರೋ ದೇವರಿಗೇ ಒಂದು ಗತಿ ಕಾಣಿಸಿಬಿಟ್ರಲ್ಲ...

Ittigecement ಹೇಳಿದರು...

INNOO SWALPA JAASTI BAREYABAHUDITTU.. NATAKADA VASTU ALLAVA? CHENNAGIDE...
THANK U.. KEEP IT UP!!!

nelamugilu ಹೇಳಿದರು...

the flow in all the "Putani Kathe" are good. Again this 'kathe' reminds me of your another story 'Rudra Bhoomi...'. anyhow continue it... doing a good job.

ಶ್ರೀನಿಧಿ.ಡಿ.ಎಸ್ ಹೇಳಿದರು...

kathegaLalli jogi sir influnce kaNistide yako!:)

mruganayanee ಹೇಳಿದರು...

ಪುಟಾಣಿ ಕಥೆಗಳು ಮುದ್ದಾಗಿವೆ ಕಾರ್ತಿಕ್! ಓದಿ ಖುಷಿಯಾಯಿತು

ninada ಹೇಳಿದರು...

kate thumba chennagide

ninada ಹೇಳಿದರು...

kate thumba chennagide

ninada ಹೇಳಿದರು...

kate thumba chennagide

ninada ಹೇಳಿದರು...

kate thumba chennagide

ಕಾರ್ತಿಕ್ ಪರಾಡ್ಕರ್ ಹೇಳಿದರು...

@ಶ್ರಿನಿಧಿ

ಯಾವುದೇ ಲೇಖಕನ ಪ್ರಭಾವದಲ್ಲಿ ಬರೆಯುವುದು ಬರಹಗಾರನೊಬ್ಬನಿಗೆ ವೈಯಕ್ತಿಕವಾಗಿ ಎಷ್ಟು ಅಪಾಯಕಾರಿ ಅನ್ನುವುದು ನನಗೆ ಗೊತ್ತಿದೆ...ನನ್ನ ಬರಹಗಳಿಗೆ ನನ್ನದೇ ಆದ ಶೈಲಿ ಇದೆ ಅನ್ನೊದು ನನ್ನ ನಂಬಿಕೆ..ನೀವು ಜೋಗಿ ಅವರ ಪ್ರಭಾವ ಅಂದಿರುವುದು ಪುಟಾಣಿ ಕತೆಗಳಲ್ಲಿರುವ ವಿಷಯ ಆಯ್ಕೆಗೋ ಅಥವಾ ನನ್ನ ಬರಹದ ಶೈಲಿಗೋ?...ಆ ಮಾತನ್ನು ನೀವು ಪುಟಾಣಿ ಕತೆಗಳನ್ನು ಗಮನದಲ್ಲಿ ಇಟ್ಟು ಹೇಳಿದ್ದಾ? ಅಥವಾ ಒಟ್ಟು ನನ್ನೆಲ್ಲಾ ಬರಹಗಳನ್ನು
ಹೇಳಿದ್ದಾ?
ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಧನ್ಯವಾದ...

ಕಳ್ಳ ಕುಳ್ಳ ಹೇಳಿದರು...

ಕಾರ್ತಿಕ್,
ಜೋಗಿ ಪ್ರಭಾವ ಇದೆ ಎಂಬ ಮಾತು ಇಲ್ಲಿ ಯಾಕೆ ಬಂತೆಂದರೆ ವಸ್ತು ಹಾಗಿದೆ ಅಂತ ಅರ್ಥ. ವಸ್ತು ಎಷ್ಟೊ ಸಲ ನಮ್ಮ ಓದಿನಿಂದ ಪ್ರಭಾವಕ್ಕೊಳಗಾಗುತದೆ.ಅದನ್ನು ನಿಧಾನವಾಗಿ ತಪ್ಪಿಸಿಕೊಳಬಹುದು
ಕತೆಯ ನಿರೂಪಣೆಯಲ್ಲಿ ಅದು ಆಗದಂತೆ ನೋಡಿಕೋಬೇಕು ಅಷ್ಟೆ.
ವಿಕಾಸ್ ನೇಗಿಲೋಣಿ

ಅನಾಮಧೇಯ ಹೇಳಿದರು...

nanoo devarago sogasige oddikolta idene kathe odi...adu sogasena anno jijnase innoo kaduttide....kathe ishtavayitu....
-praveen banagi

ಮನೋರಮಾ.ಬಿ.ಎನ್ ಹೇಳಿದರು...

very nice....marmikavada kathe...beari blognallashte ivella yake irbeku..? nuraru jana mattashtu oduwa hage madi ..