ಬುಧವಾರ, ಜುಲೈ 9, 2008

ಪ್ರಣತಿಯ ಬೆಳಕಿಗೆ ಕಾದವ (ಪುಟಾಣಿ ಕತೆ-1)

(ಇತ್ತೀಚೆಗೆ ಒಂದಷ್ಟು ಪುಟಾಣಿ ಕತೆಗಳನ್ನು ಬರೆದೆ. ಅದರಲ್ಲಿ ಇದೂ ಒಂದು)

ಅವಳು "ಪ್ರಣತಿ"

ಸಾವಿರ ಕಾರ್ತಿಕೋತ್ಸವದ ಬೆಳಕನ್ನು ತನ್ನಲ್ಲಿ ಬಚ್ಚಿಟ್ಟುಕೊಂಡವಳು. ದೇವಸ್ಥಾನದ ಗರ್ಭಗುಡಿಯ ಮುಂಬಾಗಿಲಲ್ಲಿ ಪ್ರತಿ ದಿನವೂ ಎರಡು ಹಣತೆ ಬೆಳಗುತ್ತಿದ್ದವಳು.

ಅವನು "ಅವನೇ"

ಕಾರ್ತಿಕೋತ್ಸವದ ಬೆಳಕಿನ ತೇರಲ್ಲಿ ಕಳೆದುಹೋದವ. ಪ್ರಣತಿಯ ಬೆಳಕಿಗಾಗಿ ಹಪಹಪಿಸಿದವ. ಪ್ರತಿ ದಿನವೂ ಗರ್ಭಗುಡಿಯ ಮುಂದಿನ ಬೆಳಕಲ್ಲಿ ಉಳಿದು ಹೋದವ. ಅವಳು ಹಚ್ಚಿಟ್ಟ ದೀಪ ದಿನವೂ ಆರಿ ಹೋಗುತ್ತಿದ್ದಾಗ ಗುಟ್ಟಾಗಿ ಎಣ್ಣೆ ಸುರಿದವ.

ಒಂದು "ಮುಂಜಾನೆ"
ಆತ ದೇವಸ್ಥಾನಕ್ಕೆ ಹೋದಾಗ ಪ್ರಣತಿ ಉರಿಯುತ್ತಿರಲಿಲ್ಲ. ಮಾಸಿದ ತಿಬಿಲೆ, ಬಿಳಿಯೆಲ್ಲ ಕಪ್ಪಾಗಿದ್ದ ಬತ್ತಿ ಅಷ್ಟೇ ಅಲ್ಲಿದ್ದದ್ದು. ಆತ ಪ್ರಣತಿಯ ಬೆಳಕಿಗೆ ಕಾದ. ಕೈಯಲಿದ್ದ ಎಣ್ಣೆಯ ಡಬ್ಬಿ ಹಾಗೇ ಉಳಿಯಿತು.

ರಾತ್ರಿಯಾಯಿತು, ಬೆಳಗಾಯಿತು. ವರುಷಗಳು ಉರುಳಿದವು. ಆದರೂ ಆತನ ಮೊಗದ ಕಾತರ ಕರಗಲಿಲ್ಲ.


ಕೊನೆಗೊಂದು ದಿನ ಅಲ್ಲಿ ನಿಂತಿದ್ದ ಆತ ದೇವರಾದ!

ನೋಡ ನೋಡುತ್ತಿದ್ದಂತೆ ಪ್ರಣತಿ ಆತನ ಕಣ್ಣಲ್ಲಿ ಬೆಳಗಿತು!

15 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಕತೆ ಮತ್ತು ಶೈಲಿ ತುಂಬಾ ಚೆನ್ನಾಗಿದೆ.

ಭಾವಜೀವಿ... ಹೇಳಿದರು...

ಅದ್ಭುತವಾಗಿದೆ ಕಾರ್ತೀಕ್!
ನನಗಂತೂ, ಓದಿದ ಪ್ರತಿ ಬಾರಿಯು ಹೊಸ ಹೊಳಹು, ಹೊಸ ಅರ್ಥ ಗೋಚರಿಸುತ್ತಾ ಇದೆ! ಇಂಥ ಕತೆಗಳ ಹಂದರ ಅಕ್ಷಯವಾಗಲಿ!!
ನಿಜ ಹೇಳಬೇಕೆಂದರೆ, ಈ ಕತೆಯ ಮೂರು ಕಾಲುಗಳೂ ಪ್ರತ್ಯೇಕ ಕತೆಗಳಂತೆ ಸ್ವತಂತ್ರವಾಗಿ ಹೊಳೆಯುತ್ತವೆ ಓದುಗರ ಕಣ್ಣಲ್ಲಿ ಪ್ರಣತಿಯಾಗಿ ಬೆಳಗುತ್ತವೆ, ಮನದೊಳಗೆ ಎಣ್ಣೆ ಇರಬೇಕಷ್ಟೆ!!! ;)

dinesh ಹೇಳಿದರು...

ಸೂಊಊಊಊಊಪರ್..

ಅನಾಮಧೇಯ ಹೇಳಿದರು...

Hi Karthik its good yar keep continue.............

ಅನಾಮಧೇಯ ಹೇಳಿದರು...

ತುಂಬ ಚೆನ್ನಾಗಿದೆ ಕಾರ್ತಿಕ್‌. ವೆರಿ ಗುಡ್‌.
- ರಾಧಿಕಾ

Shyam Sajankila ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Shyam Sajankila ಹೇಳಿದರು...

Kaarthik,
KathegaLu chennaagive. “Bhaavajeevi” andante, ee kathegaly Oodugara manadalli praNathiyaagi hoLeyuthave. . . manadoLage eNNe irabEkashTe.

Ninninda innoo hechchina (sankhyeyalli mattu Tookadalli) barali endu aashisuva
Shyam

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

ಬ್ಲಾಗು ನೋಡಿದೆ. ಇನ್ನು ಸರಿಯಾಗಿ ಓದಿಲ್ಲ. ಮೊದಲ ನೋಟಕ್ಕೆ ಚಂದ ಇದೆ ಅನ್ನಿಸಿತು. ಪೂರ್ತಿ ಓದಿ ಹೇಳುವೆ. ಬರೆಯುತ್ತಿರು.

ಶ್ವೇತಾ ಹೆಗಡೆ ಹೇಳಿದರು...

karteek chennagide kate... gonchalina prati bidiyoo mattondu katheyaguvashtu shaktavenisuttade...

PRASAD ಹೇಳಿದರು...

karthik...
good luck for your blogging....
i just cursered throgh it....its nice..ok..keep writing...
we are always here to read...hahahah

ಮನೋರಮಾ.ಬಿ.ಎನ್ ಹೇಳಿದರು...

chennagide..good....
pranati belaguttirali..

Unknown ಹೇಳಿದರು...

karthik...

All the best superbbbbbbbbbbb

Sree ಹೇಳಿದರು...

ಮುದ್ದಾದ ಕತೆಗಳು...ಅವಧಿಯಲ್ಲಿ ನೋಡಿ ಈಗ್ತಾನೇ ಇಲ್ಲಿ ಬಂದೆ, ಓದಿದ ಪೋಸ್ಟುಗಳೆಲ್ಲ ಇಷ್ಟವಾದ್ವು. ಹೀಗೇ ಬರೀತಿರಿ:)

ಕಳ್ಳ ಕುಳ್ಳ ಹೇಳಿದರು...

karthik
thumba shorp agide, keep writing
-vikas negiloni

yogesh ಹೇಳಿದರು...

dis s yogesh
i always keep watchig u
i m new blogger
rajayogi.wordpress.com
pls go thru it