ಮಂಗಳವಾರ, ಸೆಪ್ಟೆಂಬರ್ 23, 2008

ಕೂಡಿಸುವುದನ್ನೇ ಮರೆತು ಹೋದ...(ಪುಟಾಣಿ ಕತೆ-6)

ಪವನನಿಗೆ ಕೂಡಿಸಿ ಮಾತ್ರ ಗೊತ್ತಿತ್ತು.
ಕಳೆದು ಗೊತ್ತಿರಲಿಲ್ಲ. ಗುಣಿಸಿ, ಭಾಗಿಸಿ ಗೊತ್ತಿರಲಿಲ್ಲ.

2+2 ಅಂದ್ರೆ ಫೋರ್ ಅನ್ನುತ್ತಿದ್ದ. 18+6 ಅಂದ್ರೆ 24 ಎನ್ನುವುದು ಅವನಿಗೆ ಸರಿಯಾಗಿ ಗೊತ್ತಿತ್ತು. 2-2, 12/6, 8*3 ಎಷ್ಟು ಅಂದ್ರೆ ಅವನಿಗೆ ಬಿಲ್ ಕುಲ್ ಹೊಳೆಯುತ್ತಿರಲಿಲ್ಲ.

ಪವನ ಕೂಡಿಸಿಯೇ ಎಸ್.ಎಸ್.ಎಲ್.ಸಿ ಪಾಸಾದದ್ದು. ಕೂಡಿಸುವುದರಲ್ಲಿ ಹಿಂದೆ ಅನ್ನೋ ಕಾರಣಕ್ಕೇನೇ ನಾಲ್ಕನೇ ಕ್ರಾಸಿನ ನಳಿನಳ ಪ್ರಪೋಸಲ್ ತಿರಸ್ಕರಿಸಿದ್ದು. ಅವನಿಗೆ ಕ್ರಿಕೇಟ್ ಇಷ್ಟ. ಕಾರಣ ಸರಳ. ಅಲ್ಲಿ ರನ್ ಕೂಡಿಸುವುದಷ್ಟೇ ಕೆಲಸ.

ಹೀಗೆ ಪವನ ಕೂಡಿಸುತ್ತಾ ಕೂಡಿಸುತ್ತಾ ದೊಡ್ಡವನಾದ...ಮೀಸೆ ಮೂಡಿತು...ನರಗಳು ಜಿವ್ವೆಂದವು...ಅಕ್ಷರಗಳನ್ನ ಕೂಡಿಸುತ್ತಾ ಹೋದ...ಕತೆಯಾಯಿತು...ಕಾದಂಬರಿಯಾಯಿತು
...ಹೆಸರು ಬಂತು...ಬಿರುದು ಬಂತು...ಪುಸ್ತಕವೆಲ್ಲ ಖರ್ಚಾಗಿ ಹೋಯಿತು...ಮರು ಮುದ್ರಣಕ್ಕೆ ತಯಾರಾಯಿತು.

ಒಂದು ದಿನ ಆತನಿಗೆ ಕಳೆಯುವುದು ಹೇಗೆ, ಗುಣಿಸಿ ಭಾಗಿಸುವುದು ಹೇಗೆ ಅನ್ನುವುದು ಗೊತ್ತಾಗಿ ಹೋಯಿತು.

ಆನಂತರ ಪವನ ಕೂಡಿಸುವುದನ್ನೇ ಮರೆತು ಹೋದ!!

12 ಕಾಮೆಂಟ್‌ಗಳು:

Shamanth Patil.J. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಮನೋರಮಾ.ಬಿ.ಎನ್ ಹೇಳಿದರು...

koodisuvudara hinde adeshtu arthagalive alwa..! ?
kudi kudi konege kaledu hooguwara naduve...kaleda nenapugala olage....eshtondu kooduwike..!

Shamanth Patil.J. ಹೇಳಿದರು...

It is really a good shotr story.... see my blog http://kaaduvanenapugalu.blogspot.com/
Regards
Shamanth Patil.J.

ಕಾರ್ತಿಕ್ ಪರಾಡ್ಕರ್ ಹೇಳಿದರು...

@ಮನೋರಮಾ,
ಸತ್ಯಸ್ಯ ಸತ್ಯ ನಿಮ್ಮ ಮಾತು

@ಶಮಂತ್,
ಪ್ರತಿಕ್ರಿಯೆಗೆ ಧನ್ಯವಾದ.

ಅನಾಮಧೇಯ ಹೇಳಿದರು...

ಕತೆ ಇಷ್ಟವಾಯಿತು.
-ಅಲೆಮಾರಿ

ಆಲಾಪಿನಿ ಹೇಳಿದರು...

hey karthik, really touchy

VENU VINOD ಹೇಳಿದರು...

ಛೇ, ಪವನ ಕೂಡಿಸುವುದನ್ನ ಮರೆಯಬಾರದಿತ್ತು....
ಒಳ್ಳೆಯ ಸಣ್ಣಕಥೆ

ಚಿತ್ರಾ ಸಂತೋಷ್ ಹೇಳಿದರು...

ಏನಪ್ಪಾ ಕನ್ ಫ್ಯೂಸ್..!!!
-ಚಿತ್ರಾ

ಕಳ್ಳ ಕುಳ್ಳ ಹೇಳಿದರು...

thumba sookshma kathe idu, athi sanna katheya yella agatya gubnagalu idarallive.
keep writing karthik!
-vikas negiloni

Lakshmi Shashidhar Chaitanya ಹೇಳಿದರು...

ಜೀವನದ ಮೌಲ್ಯಗಳನ್ನು ಕೂಡಿಸಬೇಕೇ ಹೊರತು ಕಳೆದು ಗುಣಿಸಿ ಭಾಗಿಸಬಾರದೆಂಬುದನ್ನ ಬಹಳ ಸೂಚ್ಯವಾಗಿ, ಚೊಕ್ಕವಾಗಿ ತಿಳಿಸಿದ್ದೀರಿ. ಕಥೆ ಅದ್ಭುತವಾಗಿದೆ.

ಅನಾಮಧೇಯ ಹೇಳಿದರು...

Papa kano pavana. Ee reeti kaledu hogabaradittu. Vaastvavannu sanna kateya muulaka hididittiddiya. tumba esta aaytu kano.

ಅನಾಮಧೇಯ ಹೇಳಿದರು...

hey good yar.
pavange kaleyodu, gunisodu kalisiddu sri. adre kudisoda maresiddu yake?